ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಸ್.ಕೆ.ಜೈನ್ ಅವರ 'ಕಾಲಚಕ್ರ' ಬಿಡುಗಡೆ

ಖ್ಯಾತ ಜ್ಯೋತಿರ್‌ವಿಜ್ಞಾನಿ ಎಸ್.ಕೆ.ಜೈನ್ ಅವರ 'ಕಾಲಚಕ್ರ' ಆಂಗ್ಲ ...

Lingaraj Badiger
Updated On : 15 Feb 2014, 6:23 am

ಬೆಂಗಳೂರು: ಖ್ಯಾತ ಜ್ಯೋತಿರ್‌ವಿಜ್ಞಾನಿ ಎಸ್.ಕೆ.ಜೈನ್ ಅವರ 'ಕಾಲಚಕ್ರ' ಆಂಗ್ಲ ಆವೃತ್ತಿ ಪುಸ್ತಕವನ್ನು ಚಿತ್ರನಟಿ ಐಶ್ವರ್ಯ ನಾಗ್ ಅವರು ಶನಿವಾರ ಬಿಡುಗಡೆ ಮಾಡಿದರು.

ಇಂದು ನಡೆದ ಸರಳ ಸಮಾರಂಭದಲ್ಲಿ ಐಶ್ವರ್ಯ ಅವರು ಪುಸ್ತಕ ಬಿಡುಗಡೆ ಮಾಡಿದರು.

ಪುಸ್ತಕ ಬಿಡುಗಡೆ ನಂತರ ಮಾತನಾಡಿದ ಎಸ್.ಕೆ.ಜೈನ್ ಅವರು, 2014 ಜಯನಾಮ ಸಂವತ್ಸರದಲ್ಲಿ ಬಂದಿದ್ದು, ದೇಶಕ್ಕೆ ಉತ್ತಮ ಭವಿಷ್ಯ ಇದೆ. ಆದರೆ ಈ ವರ್ಷದ ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಗಂಡಾಂತರಗಳು ಕಾದಿವೆ. ಇದರ ಹೊರತಾಗಿ ಜಾಗತಿಕ ತಾಪಮಾನದಲ್ಲಿ ಬದಲಾವಣೆ ಮತ್ತು ಆರ್ಥಿಕ ಸ್ಥಿತಿ ಸ್ಥಿರವಾಗಿರುವುದಿಲ್ಲ ಎಂದು ಹೇಳಿದರು.

ಇನ್ನು ಜ್ಯೋತಿಷ್ಯ ಮೂಢನಂಬಿಕೆಯಲ್ಲ ಎಂದು ಹೇಳಿದ ಅವರು, ಇದೊಂದು ವಿಜ್ಞಾನ. ಜ್ಯೋತಿಷ್ಯ ಶಾಸ್ತ್ರವನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದಿದ್ದಾರೆ.

ಈ ಸಂದರ್ಭದಲ್ಲಿ ಶ್ರೀಮತಿ ವೀಣಾ ಜೈನ್, ಐಶ್ವರ್ಯ ನಾಗ್ ಅವರ ತಾಯಿ, ಹಿರಿಯ ಕಲಾವಿದೆ ಪ್ರಶಾಂತಿ ನಾಯಕ್, ಇಂಡಿಯನ್ ಎಕ್ಸ್‌ಪ್ರೆಸ್‌ನ ಜನರಲ್ ಮ್ಯಾನೆಜರ್ ವಿನೋದ್ ನಾಯರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement