ಕೇಜ್ರಿವಾಲ್ ರಾಜಿನಾಮೆ ಪತ್ರ ರಾಷ್ಟ್ರಪತಿಗೆ ರವಾನಿಸಿದ ಜಂಗ್
ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ರಾಜಿನಾಮೆ ಪತ್ರವನ್ನು ದೆಹಲಿ ಉಪ ರಾಜ್ಯಪಾಲ ನಜೀಬ್ ಜಂಗ್ ಅವರು ಶನಿವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರವಾನಿಸಿದ್ದಾರೆ.
ಜನಲೋಕಪಾಲ್ ಮಸೂದೆ ಜಾರಿಯಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆ ದೆಹಲಿ ಸಿಎಂ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಕೇಜ್ರಿವಾಲ್ ರಾಜಿನಾಮೆ ಪತ್ರವನ್ನು ಉಪ ರಾಜ್ಯಪಾಲ ನಜೀಜ್ ಜಂಗ್ ಅವರಿಗೆ ಸಲ್ಲಿಸಿದ್ದರು.
ಕೇಜ್ರಿವಾಲ್ ರಾಜಿನಾಮೆ ಪತ್ರವನ್ನು ಸ್ವೀಕರಿಸಿದ್ದ ನಜೀಬ್ ಜಂಗ್ ಅವರು ಇಂದು ಪ್ರಣಬ್ ಮುಖರ್ಜಿ ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರವನ್ನು ರವಾನಿಸಿದ್ದಾರೆ.