ಕೇಜ್ರಿವಾಲ್ ಸುಳ್ಳು ಹೇಳುವುದರಲ್ಲಿ ನಿಪುಣ: ಹರ್ಷವರ್ಧನ್
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಹರ್ಷವರ್ಧನ್ ..
ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಹರ್ಷವರ್ಧನ್ ಅವರು, ಕೇಜ್ರಿವಾಲ್ ಅವರು ಸುಳ್ಳು ಹೇಳುವುದರಲ್ಲಿ ನಿಪುಣ ಎಂದಿದ್ದಾರೆ.
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹರ್ಷವರ್ಧನ್, ಕೇಜ್ರಿವಾಲ್ ರಾಜಿನಾಮೆಯ ಹಿಂದೆ ಕಾಂಗ್ರೆಸ್ನ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಎಎಪಿಗೆ ವಿದೇಶಿ ಸಂಘ, ಸಂಸ್ಥೆಗಳಿಂದ ಹಣ ಬರುತ್ತಿದೆ ಎಂದು ದೂರಿದ್ದಾರೆ.
ದೇಶ ಮೊದಲ ಬಾರಿಗೆ ಒಬ್ಬ ಅರಾಜಕತೆ ಮುಖ್ಯಮಂತ್ರಿಯನ್ನು ನೋಡಬೇಕಾಗಿ ಬಂತು ಎಂದಿರುವ ಹರ್ಷವರ್ಧನ್, ಕೇಜ್ರಿವಾಲ್ ಒಬ್ಬ ಮಹಾನ್ ಸುಳ್ಳುಗಾರ ಎಂದು ಆರೋಪಿಸಿದ್ದಾರೆ.
ಇನ್ನು ಕೇಜ್ರಿವಾಲ್ ರಾಜಿನಾಮೆ ಬಗ್ಗೆ ಟ್ವಿಟ್ ಮಾಡಿರುವ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ, ಕಡೆಗೂ 'ದುಃಸ್ವಪ್ನ' ಅಂತ್ಯವಾಗಿದೆ ಎಂದು ಹೇಳಿದ್ದಾರೆ. ಕೆಟ್ಟ ಆಡಳಿತಕ್ಕೆ ಸಾಕ್ಷಿಯಾಗಿದ್ದ ದೆಹಲಿ ಸರ್ಕಾರ ಕಡೆಗೂ ರಾಜಿನಾಮೆ ನೀಡಿದೆ ಎಂದು ಟ್ವಿಟ್ ಮಾಡಿದ್ದಾರೆ.