ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಮದಾಸ್ ವಿರುದ್ಧ ಕ್ರಮಕ್ಕೆ ಪ್ರೇಮಕುಮಾರಿ ಆಗ್ರಹ

ಪ್ರಕರಣದಿಂದ ತಪ್ಪಿಸಿಕೊಳ್ಳಲು ಮಾಜಿ...

Vishwanath S
Updated On : 15 Feb 2014, 4:42 am

ಬೆಂಗಳೂರು: ಪ್ರಕರಣದಿಂದ ತಪ್ಪಿಸಿಕೊಳ್ಳಲು ಮಾಜಿ ಸಚಿವ ರಾಮದಾಸ್ ಅವರು ವಿದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ವಂಚನೆ ಆರೋಪ ಮಾಡಿರುವ ಪ್ರೇಮ ಕುಮಾರಿ ಅವರು ಶನಿವಾರ ಆರೋಪಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿ ಜೀವಾಪಾಯದಿಂದ ಪಾರಾದ ರಾಮದಾಸ್ ಅವರು ವಿಶ್ರಾಂತಿಗಾಗಿ ವಿದೇಶಕ್ಕೆ ತೆರಳಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ಪ್ರೇಮಕುಮಾರಿ, ಪ್ರಕರಣದಿಂದ ತಪ್ಪಿಸಿಕೊಳ್ಳಲು ರಾಮದಾಸ್ ಅವರು ವಿದೇಶಕ್ಕೆ ತೆರಳುತ್ತಿದ್ದಾರೆ. ರಾಮದಾಸ್ ವಿದೇಶಕ್ಕೆ ಹೋದರೆ, ಅವರು ಮಾಡಿರುವ ತಪ್ಪನ್ನು ಒಪ್ಪಿಕೊಂಡಂತೆ ಎಂದಿದ್ದಾರೆ.

ರಾಮದಾಸ್ ನನ್ನ ಬದುಕಿನ ಹಕ್ಕು ಕಸಿದುಕೊಂಡಿದ್ದಾರೆ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿರುವ ಪ್ರೇಮಕುಮಾರಿ, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಮಾಜಿ ಸಚಿವರು ವಿದೇಶಕ್ಕೆ ತೆರಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಂಚನೆ ಮತ್ತು ಜೀವ ಬೆದರಿಕೆ ಆರೋಪ ಪ್ರಕರಣ ಬಗ್ಗೆ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ರಾಮದಾಸ್ ಕಾನೂನಿಗೆ ತಲೆಬಾಗಿ ತನಿಖೆಗೆ ಸಹಕರಿಬೇಕು ಅದನ್ನು ಬಿಟ್ಟು ವಿದೇಶಕ್ಕೆ ತೆರಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ವಿದೇಶಕ್ಕೆ ತೆರಳುವ ಮುನ್ನ ಪ್ರಕರಣ ಸಂಬಂಧ ಸ್ಪಷ್ಟಿಕರಣ ನೀಡಿ ಎಂದು ಪ್ರೇಮಕುಮಾರಿ ಪಟ್ಟು ಹಿಡಿದಿದ್ದಾರೆ.

ನ್ಯಾಯ ಎಲ್ಲರಿಗೂ ಒಂದೇ. ಆದರೆ ಬಡವರಿಗೆ ನ್ಯಾಯ ಸಿಗುತ್ತಿಲ್ಲ..? ಪ್ರಕರಣದಲ್ಲಿ ನನಗೊಂದು ನ್ಯಾಯ... ಅವರಿಗೊಂದು ನ್ಯಾಯಾನ ಎಂದು ಪ್ರೇಮಕುಮಾರಿ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement