ವಿದೇಶಕ್ಕೆ ತೆರಳಲಿರುವ ರಾಮದಾಸ್
ಆತ್ಮಹತ್ಯೆಗೆ ಯತ್ನಿಸಿ ಜೀವಾಪಾಯದಿಂದ ಪಾರಾದ ಮಾಜಿ ಸಚಿವ ರಾಮದಾಸ್ ಅವರು ವಿಶ್ರಾಂತಿಗಾಗಿ ವಿದೇಶಕ್ಕೆ ತೆರಳಲಿದ್ದಾರೆ...
ಮೈಸೂರು: ಆತ್ಮಹತ್ಯೆಗೆ ಯತ್ನಿಸಿ ಜೀವಾಪಾಯದಿಂದ ಪಾರಾದ ಮಾಜಿ ಸಚಿವ ರಾಮದಾಸ್ ಅವರು ವಿಶ್ರಾಂತಿಗಾಗಿ ವಿದೇಶಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಮೈಸೂರಿನ ಅಪೊಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಾಮದಾಸ್ ಅವರು ಇಂದು ಸಂಜೆ ವಿದೇಶಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರಿನ ಪ್ರೇಮಕುಮಾರಿ ಎಂಬುವವರು ವಂಚನೆ ಆರೋಪ ಮಾಡಿದ ಹಿನ್ನಲೆಯಲ್ಲಿ ರಾಮದಾಸ್ ಅವರು ಫೆಬ್ರವರಿ 11ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿನ್ನೆ ರಾಮದಾಸ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದರ ಬೆನ್ನಲ್ಲೇ ರಾಮದಾಸ್ ವಿದೇಶ ಪ್ರಯಾಣಕ್ಕೆ ಸಜ್ಜಾಗಿದ್ದಾರೆ.
ನಿನ್ನೆ ಪ್ರೇಮಕುಮಾರಿ ಅವರು ರಾಮದಾಸ್ ವಿರುದ್ಧ ಕೊಲೆ ಯತ್ನ , ವಂಚನೆ, ಕೊಲೆ ಬೆದರಿಕೆ ದೂರು ದಾಖಲಿಸಿದ್ದರು.