ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೀಲು ಒತ್ತಿದ ಅನೂಪ್ ಸೀಳಿನ್!

ರಾಜ್ಯ ಪ್ರಶಸ್ತಿ ಬಂದ ಪ್ರಶಸ್ತ ಸಮಯದಲ್ಲೇ ಸಂಗೀತ ನಿರ್ದೇಶಕ ಅನೂಪ್ ಸೀಳಿನ್...

Vishwanath S
Updated On : 15 Feb 2014, 8:09 am

ರಾಜ್ಯ ಪ್ರಶಸ್ತಿ ಬಂದ ಪ್ರಶಸ್ತ ಸಮಯದಲ್ಲೇ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ತಮಿಳು ಚಿತ್ರವೊಂದರ ಹೃದಯ ಮಂದಿರವಾಗಿದ್ದಾರೆ! ಈ ಮಾತು ಸರಿಯೋ ತಪ್ಪೋ ಎಂದು ತಿಳಿಯಲಿಕ್ಕಾದರೂ ಅನೂಪ್ ಸಂಗೀತ ನೀಡಿರುವ 'ಗೋಲಿ ಸೋಡಾ' ಚಿತ್ರ ನೋಡಬಹುದು. ಹೌದು!! 'ಗೋಲಿ ಸೋಡಾ' ಚಿತ್ರದಿಂದ ಅನೂಪ್ ಸೀಳಿನ್ ತಮಿಳಿನಲ್ಲಿಯೂ ತಮ್ಮ ಸೀಲು ಒತ್ತಿದ್ದಾರೆ...

'ಗೋಲಿ ಸೋಡಾ' ಚಿತ್ರದ ಪ್ರೀಮಿಯರ್ ಶೋ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಾಗ ಅನೂಪ್ ರ ಹಲವಾರು ಸ್ನೇಹಿತರು ಈ ಚಿತ್ರವನ್ನು ನೋಡಿ "ಅನೂಪ'ಮ  ಅನುಭವ ಪಡೆದರು. ಅನೂಪ್ 'ಗೋಲಿ ಸೋಡಾ' ಚಿತ್ರದ ಆತ್ಮವೇ ಆಗಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಹಿನ್ನೆಲೆ ಸಂಗೀತಕ್ಕೆ ಸಿಕ್ಕ ಅವಕಾಶವನ್ನು ಆಕಾಶದಷ್ಟು ಉತ್ತುಂಗಕ್ಕೆ ಏರಿಸುವಸ್ಟು ಯಶಸ್ವಿಯಾಗಿದ್ದಾರೆ. ಚಿತ್ರಕ್ಕೆ ಒಂದು ಚಲನಶೀಲತೆ ತರುವ ಶಕ್ತಿ, ಪಾತ್ರಗಳ ನೋವುಗಳನ್ನು ನಲಿವನ್ನು ಸಪ್ತಸ್ವರಗಳಲ್ಲಿ ಸಾಗರವಾಗಿಸುವ ಶಕ್ತಿ ಅನೂಪ್ ರದು ಎಂಬುದಕ್ಕೆ ಈ ಚಿತ್ರದ ಹಿನ್ನೆಲೆ ಸಂಗೀತ ಸಾಕ್ಷಿ. ಅದಕ್ಕೆ ಸಾಕ್ಷಿಯಾಗಿ ನಿರ್ದೇಶಕ ವಿಜಯ ಪ್ರಸಾದ್, ಸೂರಿ, ಕೆ ಎಂ ಚೈತನ್ಯ, 'ಬಿಗ್ ಬಾಸ್' ಅರುಣ್ ಸಾಗರ್, ಛಾಯಾಗ್ರಾಹಕ ಸುಜ್ಞಾನ್, ನಿರ್ಮಾಪಕ ಉದಯ್ ಮೆಹ್ತಾ, ಸಂಗೀತ ನಿರ್ದೇಶಕ ಧರ್ಮ ಮುಂತಾದವರು 'ಗೋಲಿ ಸೋಡಾ' ಚಿತ್ರ ನೋಡಲು ಹಾಜರಿದ್ದರು.ಅನೂಪ್ ವ್ಯವಸ್ಥೆ ಮಾಡಿದ್ದ ಈ ಚಿತ್ರ ಪ್ರದರ್ಶನದಲ್ಲಿ ಅವರ ಪತ್ನಿ ನಟಿ ಕೃತಿಯವರು ತಮ್ಮ ಸುಂದರ ನಗೆಯ ಲಯದಿಂದ ಅನೂಪ್ ರ ಜೊತೆ ಇದ್ದರು.

ಈ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಅನೂಪ್ ಎರಡು ತಿಂಗಳು ಪರಿಶ್ರಮ ಪಟ್ಟಿದ್ದು ಚಿತ್ರದ ಪ್ರತಿಯೊಂದು ಪುಟ್ಟ 'ಬೀಟ್ 'ನಲ್ಲಿ ಕೇಳುತ್ತಿತ್ತು. ನಿರ್ದೇಶಕ ವಿಜಯಪ್ರಸಾದ್ ರ 'ಸಿದ್ಲಿಂಗು' ಚಿತ್ರಕ್ಕೆ ಅದ್ಭುತ ಸಂಗೀತ ನೀಡಿ ರಾಜ್ಯಪ್ರಶಸ್ತಿ ಗಳಿಸಿದ್ದ ಅನೂಪ್ 'ಗೋಲಿ ಸೋಡಾ' ಚಿತ್ರಕ್ಕೆ ಪ್ರಶಸ್ತಿ ಗಳಿಸಿದಲ್ಲಿ ಅವರು ಅದಕ್ಕೆ ಅರ್ಹರು ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗೆಯೇ 'ಗೋಲಿ ಸೋಡಾ' ಚಿತ್ರ ಅತ್ಯಂತ ತಾಜಾ ಚಿತ್ರ ಎಂಬುದರಲ್ಲಿಯೂ ಕೂಡಾ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement