ನೇಪಾಳ: 18 ಜನರಿದ್ದ ವಿಮಾನ ನಾಪತ್ತೆ
ಕಠ್ಮಂಡು: ಹದಿನೆಂಟು ಜನರನ್ನು ಹೊತ್ತೊಯ್ಯುತ್ತಿದ್ದ ನೇಪಾಳ ವಿಮಾನವೊಂದು ಭಾನುವಾರ ನಾಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹದಿನಾಲ್ಕು ಪ್ರಯಾಣಿಕರು ಸೇರಿದಂತೆ 18 ಮಂದಿಯನ್ನು ಹೊತ್ತೊಯ್ಯುತ್ತಿದ್ದ ನೇಪಾಳ ವಿಮಾನವು ಪೂರ್ವ ನೇಪಾಳದ ಪೊಖಾರ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.30ರ ಸುಮಾರಿನಲ್ಲಿ ಹೊರಟಿತು. ಆದರೆ ಟೆಕ್ ಆಫ್ ಆದ ಹದಿನೈದು ನಿಮಿಷದ್ದಲ್ಲೆ ವಿಮಾನ ನಾಪತ್ತೆಯಾಗಿದೆ ಎಂದು ನೇಪಾಳ ಪೊಲೀಸ್ ವಕ್ತಾರ ಕೆ.ಸಿ ಗಣೇಶ್ ಅವರು ತಿಳಿಸಿದ್ದಾರೆ.
ವಿಮಾನ ನಾಪತ್ತೆ ಹಿನ್ನೆಲೆಯಲ್ಲಿ ವಿಮಾನ ಶೋಧ ಕಾರ್ಯ ಆರಂಭಗೊಂಡಿದೆ.