ಪ್ರೇಮ ವಿವಾದ: ಸಿಎಂಗೆ ಪತ್ರ ಬರೆದ ರಾಮದಾಸ್
ನನ್ನು ವಿರುದ್ಧ ಸುಳ್ಳು ಆರೋಪ ಮಾಡಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಎಂದು ಮಾಜಿ ಸಚಿವ ರಾಮದಾಸ್ ಮುಖ್ಯಮಂತ್ರಿ...
ಮೈಸೂರು: ನನ್ನು ವಿರುದ್ಧ ಸುಳ್ಳು ಆರೋಪ ಮಾಡಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಎಂದು ಮಾಜಿ ಸಚಿವ ರಾಮದಾಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಚಿಕ್ಕಮಗಳೂರಿನ ಪ್ರೇಮಕುಮಾರಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಇದರಿಂದ ನನ್ನ ಘನತೆ ಮತ್ತು ರಾಜಕೀಯಕ್ಕೆ ಧಕ್ಕೆಯುಂಟಾಗಿದೆ ಎಂದು ರಾಮದಾಸ್ ಹೇಳಿದ್ದಾರೆ.
ನನ್ನ ವಿರುದ್ಧ ಸುಳ್ಳು ಆರೋಪ ಮಾಡುವುದಕ್ಕೆ ರಾಜಕೀಯ ಪ್ರೇರಣೆಯಾಗಿದೆ ಹಾಗೂ ಬ್ಲಾಕ್ ಮೇಲೆ ಮಾಡಲಾಗಿದೆ ಎಂದು ರಾಮದಾಸ್ ಆರೋಪಿಸಿದ್ದಾರೆ.
ಆದ್ದರಿಂದ ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ತಿಳಿಸಿ. ತೇಜೋವಧೆಗೆ ಒಳಗಾಗಿರುವ ನನಗೆ ನ್ಯಾಯಾ ಕೊಡಿಸಿ ಎಂದು ರಾಮದಾಸ್ ಮನವಿ ಮಾಡಿದ್ದಾರೆ.