ಕಾರು, ಚಿನ್ನ ಪ್ರಿಯರಿಗೆ ಚಿದು ಬಂಪರ್ ಕೊಡುಗೆ
ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ಕಾರು, ಬೈಕು ಮತ್ತು ಚಿನ್ನ ಪ್ರಿಯರಿಗೆ ತಮ್ಮ ಮಧ್ಯಂತರ ಬಜೆಟ್ನಲ್ಲಿ ಬಂಪರ್...
ನವದೆಹಲಿ: ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ಕಾರು, ಬೈಕು ಮತ್ತು ಚಿನ್ನ ಪ್ರಿಯರಿಗೆ ತಮ್ಮ ಮಧ್ಯಂತರ ಬಜೆಟ್ನಲ್ಲಿ ಬಂಪರ್ ಕೊಡುಗೆ ನೀಡಿದ್ದು, ಮೊದಲ ಬಾರಿಗೆ ವಿದೇಶದಿಂದ ಸುಂಕ ಪಾವತಿಸದೇ ಚಿನ್ನ ತರಬಹುದು ಎಂಬ ಘೋಷಣೆ ಮಾಡಿದ್ದಾರೆ.
ವಿದೇಶದಿಂದ ಪುರುಷರು ತರುವ 50 ಸಾವಿರ ಹಾಗೂ ಸ್ಥೀಯರು ತರುವ 1 ಲಕ್ಷ ರುಪಾಯಿ ಮೌಲ್ಯದ ಚಿನ್ನಕ್ಕೆ ಸುಂಕ ವಿನಾಯ್ತಿ ನೀಡಲಾಗಿದೆ. ಇನ್ನು ಎಸ್ಯುವಿ ಹಾಗೂ ಚಿಕ್ಕ ಗಾತ್ರದ ಕಾರು, ಬೈಕ್ಗಳ ಮೇಲಿನ ಅಬಕಾರಿ ಸುಂಕವನ್ನು ಶೇ.12ರಿಂದ 8ಕ್ಕೆ ಇಳಿಸಲಾಗಿದ್ದು, ಕಾರು, ಬೈಕಿನ ಮಾರಾಟ ಬೆಲೆ ಕಡಿಮೆಯಾಗಲಿದೆ.
ಯಾವುದು ಕಡಿಮೆ
ಚಿನ್ನಾಭರಣ
ಚಿಕ್ಕ ಹಾಗೂ ಎಸ್ಯುವಿ ಕಾರು
ಬೈಕ್
ಸ್ವದೇಶಿ ಮೊಬೈಲ್, ಟೀವಿ ಫ್ರಿಡ್ಜ್
ಸೋಪು
ಯಾವುದು ಹೆಚ್ಚಳ
ಐಶಾರಾಮಿ ಕಾರು
ವಿದೇಶಿ ಮೊಬೈಲ್
ಸೆಟ್ಟಾಪ್ ಬಾಕ್ಸ್
ಸಿಗರೇಟ್, (ಸಿಗರೇಟ್ ಮೇಲಿನ ಅಬಕಾರಿ ಸುಂಕ ಶೇ.18ರಷ್ಟು ಹೆಚ್ಚಳ)