ಕೇಂದ್ರ ಮಧ್ಯಂತರ ಬಜೆಟ್ ನ ಮುಖ್ಯಾಂಶಗಳು
ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮಂಡಿಸಿದ 2014-15ನೇ ಸಾಲಿನ ಬಜೆಟ್...
ನವೆದೆಹಲಿ: ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮಂಡಿಸಿದ 2014-15ನೇ ಸಾಲಿನ ಬಜೆಟ್ ಮುಖ್ಯಾಂಶಗಳು
- ಸ್ವದೇಶಿ ಸಾಬೂನು ಬೆಲೆ ಇಳಿಕೆ
- ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 1200 ಕೋಟಿ ರು.
- ರೇಲ್ವೆ ಇಲಾಖೆಗೆ 29 ಸಾವಿರ ಕೋಟಿ ರು. ಅನುದಾನ
- 10 ವರ್ಷಗಳಲ್ಲಿ ಅಲ್ಪಸಂಖ್ಯಾತರ ಬ್ಯಾಂಕ್ ಖಾತೆ ಹೆಚ್ಚಳ
- 2 ಸಾವಿರ ರೂಪಾಯಿ ತೆರಿಗೆ ರಿಯಾಯಿತಿಗೆ ನಿರ್ಧಾರ
- ವಿದೇಶದಿಂದ ಖರೀದಿಸಿ ತರುವ ಚಿನ್ನಕ್ಕೆ ಸುಂಕ ಇಲ್ಲ
- ಸುಂಕ ಪಾವತಿಸದೇ ಚಿನ್ನ ತರಬಹುದೆಂದು ಘೋಷಣೆ
- ಸ್ತ್ರೀಯರು ತರುವ 1 ಲಕ್ಷ ಮೌಲ್ಯದ ಚಿನ್ನಕ್ಕೆ ಸುಂಕ ಇಲ್ಲ
- ನಿರ್ಭಯ ನಿಧಿಗೆ 1000 ಕೋಟಿ ರೂಪಾಯಿ ಮೀಸಲು
- ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 21 ಸಾವಿರ ಕೋಟಿ
- ಗ್ರಾಮೀಣಾಭಿವೃದ್ಧಿ ಇಲಾಖೆಗೆ 82,202 ಕೋಟಿ
- ಪರಿಶಿಷ್ಟ ಜಾತಿ ಉಪಯೋಜನೆಗಳಿಗೆ 48 ಸಾವಿರ ಕೋಟಿ ಮೀಸಲು
- ಕಮ್ಯುನಿಟಿ ರೇಡಿಯೋಗಳಿಗೆ 100 ಕೋಟಿ ಮೀಸಲು
- ಹೊಸ ಬ್ಯಾಂಕ್ ಲೈಸೆನ್ಸ್ಗಳಿಗೆ ಅರ್ಜಿ ವಿತರಣೆ
- 41 ಲಕ್ಷದ 16 ಸಾವಿರ ಮಹಿಳೆಯರಿಗೆ ಸ್ವಸಹಾಯ ಗುಂಪಿನಿಂದ ಸಾಲ
- ಮೂಲ ಸೌಕರ್ಯ ಕ್ಷೇತ್ರದಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಬೇಕು
- ಸಕ್ಕರೆ ನಿಯಂತ್ರಣ ರದ್ದು, ಡೀಸೆಲ್ ಬೆಲೆಗಳ ಸಮೀಕರಣ
- ಗೃಹ ಇಲಾಖೆಗೆ 2,24,000 ಕೋಟಿ ರು. ಅನುದಾನ
- ವಿದ್ಯಾರ್ಥಿಗಳ ಸಾಲದ ಮೇಲಿನ ಬಡ್ಡಿ ದರ ಇಳಿಕೆ
- ಫ್ರಿಜ್ಡ್, ಟಿವಿ, ಭಾರತದಲ್ಲಿ ಉತ್ಪಾದನೆಯಾಗುವ ಮೊಬೈಲ್ ಬೆಲೆ ಇಳಿಕೆ
- ಆರೋಗ್ಯ, ಕುಟಂಬ ಕಲ್ಯಾಣಕ್ಕೆ 33,725 ಕೋಟಿ ರು.
- ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
- ಪಂಚಾಯತ್ ರಾಜ್ ಇಲಾಖೆಗೆ 7,000 ಕೋಟಿ
- ಮಾನವ ಸಂಪನ್ಮೂಲ ಅಭಿವೃದ್ಧಿಗೆ 67,398 ಕೋಟಿ
- ಕುಡಿಯುವ ನೀರು ಒಳಚರಂಡಿಗೆ 15 ಸಾವಿರ ಕೋಟಿ
- ಬೆಂಗಳೂರು ಸೇರಿದಂತೆ ದೇಶದ 3 ವಲಯಗಳಲ್ಲಿ ಕೈಗಾರಿಕಾ ಕಾರಿಡಾರ್
- ಸಮಾಜ ಕಲ್ಯಾಣ ಇಲಾಖೆ-6730 ಕೋಟಿ ರುಪಾಯಿ
- ವಸತಿ ಇಲಾಖೆ - 6000 ಕೋಟಿ ರೂಪಾಯಿ ಅನುದಾನ
- ಬುಡಕಟ್ಟು ಸಮುದಾಯ ಅಭಿವೃದ್ಧಿ -4,379 ಕೋಟಿ
- ಯೋಧರ ಪಿಂಚಣಿಗೆ 500 ಕೋಟಿ ಮೀಸಲು