ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಿದಂಬರಂ ಲೇಖಾನುದಾನಕ್ಕೆ ಪ್ರಧಾನಿ ಪ್ರಶಂಸೆ

Vishwanath S
Updated On : 17 Feb 2014, 2:58 am

ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಅವರು ಮಂಡಿಸಿದ ಮಧ್ಯಂತರ ಬಜೆಟ್(ಲೇಖಾನುದಾನ) 'ಸಮತೋಲಿತ ಬಜೆಟ್‌' ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಾಲ್ಕು ತಿಂಗಳ ಅವಧಿಗಾಗಿ ಇಂದು ಚಿದಂಬರಂ ಅವರು ಲೇಖಾನುದಾನ ಮಂಡಿಸಿದ್ದು, ಇದು ಯುಪಿಎ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ ಆಗಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಿಂಗ್ ಇದೊಂದು ಸಮತೋಲಿತ ಬಜೆಟ್ ಎಂದು ಟ್ವಿಟ್ ಮಾಡಿದ್ದಾರೆ.

ಸರಕು ಮತ್ತು ಗ್ರಾಹಕರ ಬೆಲೆಬಾಳುವ ವಸ್ತುಗಳ ಮೇಲಿನ ಅಬಕಾರಿ ಸುಂಕವನ್ನು ಶೇ.12 ರಿಂದ ಶೇ. 10ಕ್ಕೆ ಇಳಿಸಲಾಗಿರುವುದು ಆಶಾದಾಯವಾಗಿದೆ ಎಂದಿದ್ದಾರೆ.

10 ವರ್ಷಗಳ ಹಿಂದೆ ಶಿಕ್ಷಣ ಕ್ಷೇತ್ರಕ್ಕೆ ಕೇವಲ 10 ಸಾವಿರ ಕೋಟಿ ಅನುದಾನ ನಿಗದಿ ಮಾಡಲಾಗಿತ್ತು. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ 79 ಸಾವಿರ ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 20 ಸಾವಿರ ಕಿ.ಮೀ.ರಸ್ತೆ ನಿರ್ಮಿಸಿದ್ದೇವೆ ಮತ್ತು ಕಳೆದ 9 ತಿಂಗಳಲ್ಲಿ 29 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದ್ದೇವೆ ಎಂದು ಚಿದಂಬರಂ ಯುಪಿಎ-1 ಮತ್ತು 2ರ ಸಾಧನೆಗಳನ್ನು ವಿವರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement