ಲಕ್ಷ್ಮಣ್‌ಗೆ 'ಚಾಣಕ್ಯ' ಪ್ರಶಸ್ತಿ ಪ್ರದಾನ
ನ್ಯಾಷನಲ್ ಅಸೆಸ್ಮೆಂಟ್ ಆ್ಯಂಡ್ ಅಕ್ರಿಡಿಟೇಶನ್ ಕೌನ್ಸಿಲ್(ಎನ್‌ಎಎಸಿ)...
ಮುಂಬೈ: ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ನ್ಯಾಷನಲ್ ಅಸೆಸ್ಮೆಂಟ್ ಆ್ಯಂಡ್ ಅಕ್ರಿಡಿಟೇಶನ್ ಕೌನ್ಸಿಲ್(ಎನ್‌ಎಎಸಿ)ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಲಕ್ಷ್ಮಣ್ ವಿ. ಅವರಿಗೆ ಭರವಸೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಭಾಗದಲ್ಲಿ 2014ನೇ ಸಾಲಿನ 'ಚಾಣಕ್ಯ' ಪ್ರಶಸ್ತಿಯನ್ನು ಇತ್ತೀಚೆಗೆ ಪ್ರದಾನ ಮಾಡಲಾಯಿತು.
ಆದಿತ್ಯ ಬಿರ್ಲಾ ಗ್ರೂಪ್ ನಿರ್ದೇಶಕಿ ರಾಜಶ್ರೀ ಬಿರ್ಲಾ ಅವರು ಲಕ್ಷ್ಮಣ್ ಅವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಎಮೆರೈಟ್‌ಸ್ ಮತ್ತು ಪಿಆರ್‌ಸಿಐ ಮುಖ್ಯಸ್ಥ ಎಂ.ಬಿ.ಜಯರಾಮ್, ಪಿಆರ್‌ಸಿಐ ಅಧ್ಯಕ್ಷ ಆರ್.ಟಿ.ಕುಮಾರ್ ಮತ್ತು ಪಿಆರ್‌ಸಿಐ ಪ್ರಧಾನ ಕಾರ್ಯದರ್ಶಿ ಬಿ.ಎನ್.ಕುಮಾರ್ ಅವರು ಉಪಸ್ಥಿತರಿದ್ದರು.