ಆಂಧ್ರ ಸಿಎಂ ಸೇರಿ 50 ಶಾಸಕರ ರಾಜಿನಾಮೆ?
ತೆಲಂಗಾಣ ಪ್ರತ್ಯೆಕ ರಾಜ್ಯ ರಚನೆ ವಿವಾದವೀಗ ಆಂಧ್ರಪ್ರದೇಶ ಕಾಂಗ್ರೆಸ್ನಲ್ಲಿ ಭಾರಿ ಬಂಡಾಯಕ್ಕೆ ಎಡೆ ಮಾಡಿಕೊಟ್ಟಿದ್ದು, ಮುಖ್ಯಮಂತ್ರಿ ಕಿರಣ್ಕುಮಾರ್ ರೆಡ್ಡಿ ಸೇರಿದಂತೆ...
ನವದೆಹಲಿ: ತೆಲಂಗಾಣ ಪ್ರತ್ಯೆಕ ರಾಜ್ಯ ರಚನೆ ವಿವಾದವೀಗ ಆಂಧ್ರಪ್ರದೇಶ ಕಾಂಗ್ರೆಸ್ನಲ್ಲಿ ಭಾರಿ ಬಂಡಾಯಕ್ಕೆ ಎಡೆ ಮಾಡಿಕೊಟ್ಟಿದ್ದು, ಮುಖ್ಯಮಂತ್ರಿ ಕಿರಣ್ಕುಮಾರ್ ರೆಡ್ಡಿ ಸೇರಿದಂತೆ ಸುಮಾರು ಸೀಮಾಂಧ್ರ 50 ಶಾಸಕರು ನಾಳೆ ರಾಜಿನಾಮೆ ನೀಡುವ ಸಾಧ್ಯತೆಗಳಿವೆ.
ಈ ಸಂಬಂಧ ಕಿರಣ್ ಕುಮಾರ್ ರೆಡ್ಡಿ ಅವರು ನಾಳೆ ಬೆಳಗ್ಗೆ 10.45ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಠಿ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ರಾಜಿನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಇದೆ. ಜೊತೆಗೆ ನೂತನ ಪಕ್ಷ ಸ್ಥಾಪನೆ ಮಾಡಲಿದ್ದಾರೆ ಎನ್ನಲಾಗಿದೆ.
ತೆಲಂಗಾಣ ವಿವಾದ ಹಿನ್ನೆಲೆಯಲ್ಲಿ ಆಂಧ್ರದಲ್ಲಿ ಕಾಂಗ್ರೆಸ್ ಇಬ್ಭಾಗವಾಗುವ ಹಾದಿಯಲ್ಲಿದ್ದು, ಕಿರಣ್ ಕುಮಾರ್ ರೆಡ್ಡಿ, ಸೇರಿ 50 ಶಾಸಕರು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವ ರಾಜಿನಾಮೆ ನೀಡಲಿದ್ದಾರೆ.
ಬಾರಿ ವಿರೋಧದ ನಡುವೆಯು ಇಂದು ಲೋಕಸಭೆಯಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಮಸೂದೆ ಅಂಗೀಕಾರವಾಗಿದ್ದು, ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾದ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ಆಂಧ್ರಪ್ರದೇಶದ ಕಾಂಗ್ರೆಸ್ನಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ.
ಈ ವೇಳೆ, ಅಖಂಡ ಆಂಧ್ರಪ್ರದೇಶಕ್ಕಾಗಿ ಬೆಂಬಲಿಸಿ ಆಂಧ್ರದ ಮೂಲಸೌಕರ್ಯ ಸಚಿವ ಗಂಟಾ ಶ್ರೀನಿವಾಸ್ ಅವರು ತಮ್ಮ ಸಚಿವ ಸ್ಥಾನ ಸೇರಿದಂತೆ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡಿದ್ದಾರೆ.