ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಂಗ್ರೆಸ್ ಮುಕ್ತ ಭಾರತಕ್ಕೆ ಮೋದಿ ಪಣ

ಕಾಂಗ್ರೆಸ್ ಅಹಂಕಾರದಿಂದ ಮೆರೆಯುತ್ತಿದೆ. ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್‌ಗೆ ಕಿಂಚಿತ್ತೂ ಚಿಂತೆಯಿಲ್ಲ. ಇವರಿಗೆ ತಕ್ಕ ಪಾಠ ಕಲಿಸಬೇಕಿದೆ.

Lingaraj Badiger
Updated On : 18 Feb 2014, 5:01 am

ದಾವಣಗೆರೆ: ಕಾಂಗ್ರೆಸ್ ಅಹಂಕಾರದಿಂದ ಮೆರೆಯುತ್ತಿದೆ. ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್‌ಗೆ ಕಿಂಚಿತ್ತೂ ಚಿಂತೆಯಿಲ್ಲ. ಇವರಿಗೆ ತಕ್ಕ ಪಾಠ ಕಲಿಸಬೇಕಿದೆ. 'ಕಾಂಗ್ರೆಸ್ ಮುಕ್ತ' ಭಾರತವೇ ಇವರಿಗೆ ಸರಿಯಾದ ಶಿಕ್ಷೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಇಂದು ನಗರದ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿಯ 'ಭಾರತ ಗೆಲ್ಲಿಸಿ' ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸೀಮಾಂಧ್ರ ಸಂಸದರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮೇಡಂ ಸೋನಿಯಾ ಗಾಂಧಿಗೆ ಹಾಗೂ ಯುವರಾಜ ರಾಹುಲ್ ಗಾಂಧಿಗೆ ಆಂಧ್ರಕ್ಕೆ ಹೋಗಲು ಪುರುಸೊತ್ತಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ದೇಶವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಹೀಗಾಗಿ ಇವರಿಗೆ ಸಣ್ಣ ಪುಟ್ಟ ಶಿಕ್ಷೆ ಸರಿಯಾಗುವುದಿಲ್ಲ. ಇವರಿಗೆ ದೊಡ್ಡ ಶಿಕ್ಷೆಯೇ ಕೊಡಬೇಕು. 'ಕಾಂಗ್ರೆಸ್ ಮುಕ್ತ' ಭಾರತ ನಿರ್ಮಾಣವೇ ಸರಿಯಾದ ಶಿಕ್ಷೆ ಎಂದು ಹೇಳಿದರು.

ಕಾಂಗ್ರೆಸ್ ಬಳಿ ಪ್ರಜಾಪ್ರಭುತ್ವವೇ ಇಲ್ಲ. ಇಡೀ ಪಕ್ಷದ ಹಿಡಿತ ಒಂದು ಕುಟುಂಬದಲ್ಲಿದ್ದು, ಕುಟುಂಬವಾದ, ಜಾತಿವಾದ, ಸಂಪ್ರದಾಯವಾದ ಹಾಗೂ ಅವಕಾಶವಾದ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮೋದಿ ಹೇಳಿದರು.

ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರದಂತೆ ಹಲವು ನಾಯಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement