ಯಾವ ಕಾನೂನಡಿ ಇಟಲಿ ನೌಕಾ ಸಿಬ್ಬಂದಿಗಳಿಗೆ ಶಿಕ್ಷೆ ನೀಡಬೇಕು?: ಸುಪ್ರೀಂ
ಭಾರತೀಯ ಮೀನುಗಾರರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್...
ನವದೆಹಲಿ: ಭಾರತೀಯ ಮೀನುಗಾರರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಮಂಗಳವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಇಬ್ಬರು ಭಾರತೀಯ ಮೀನುಗಾರರನ್ನು ಹತ್ಯೆ ಮಾಡಿದ ಇಬ್ಬರು ಇಟಲಿ ನೌಕಾ ಸಿಬ್ಬಂದಿಗಳಿಗೆ ಯಾವ ಕಾನೂನಡಿ ಶಿಕ್ಷೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಪ್ರಶ್ನಿಸಿದೆ.
ತಮ್ಮ ಪ್ರಶ್ನೆಗೆ ಕೂಡಲೇ ಉತ್ತರಿಸುವಂತೆ ನ್ಯಾಯಾಮೂರ್ತಿ ಬಿ.ಎಸ್ ಚೌವ್ಹಾಣ್ ಅವರನ್ನೊಳಗೊಂಡ ನ್ಯಾಯಾಪೀಠ ಸೂಚಿಸಿದ್ದು, ನಾಳೆಗೆ ವಿಚಾರಣೆಯನ್ನು ಮುಂದೂಡಲಾಗಿದೆ.