ಸಂಜಯ್ ದತ್‌ರ ಪೆರೋಲ್ ಅವಧಿ ವಿಸ್ತರಣೆ
ಪತ್ನಿ ಮಾನ್ಯತ ದತ್ ಅವರ ಅನಾರೊಗ್ಯದ ಹಿನ್ನಲೆಯಲ್ಲಿ ಬಾಲಿವುಡ್ ನಟ ಸಂಜಯ್ ದತ್ ಮತ್ತೆ ಪೆರೋಲ್ ಅವಧಿಯನ್ನು ಮಂಗಳವಾರ ವಿಸ್ತರಿಸಲಾಗಿದೆ...
ಮುಂಬೈ: ಪತ್ನಿ ಮಾನ್ಯತ ದತ್ ಅವರ ಅನಾರೊಗ್ಯದ ಹಿನ್ನಲೆಯಲ್ಲಿ ಬಾಲಿವುಡ್ ನಟ ಸಂಜಯ್ ದತ್ ಗೆ ಮತ್ತೆ ಪೆರೋಲ್ ಅವಧಿಯನ್ನು ಮಂಗಳವಾರ ವಿಸ್ತರಿಸಲಾಗಿದೆ.
ಪತ್ನಿ ಮಾನ್ಯತ ದತ್ ಅವರ ಅನಾರೊಗ್ಯದ ಹಿನ್ನಲೆಯಲ್ಲಿ ಮತ್ತೆ ಒಂದು ತಿಂಗಳವರೆಗೆ ಪರೋಲ್ ವಿಸ್ತರಿಸುವಂತೆ ಬಾಲಿವುಡ್ ನಟ ಸಂಜಯ್ ದತ್ ಮನವಿ ಮಾಡಿದ್ದರು.
3ನೇ ಬಾರಿಗೆ ದತ್‌ಗೆ ಪೆರೋಲ್ ಸಿಕ್ಕಿದ್ದು, ಮಾರ್ಚ್ 21ರವರೆಗೆ ಪೆರೋಲ್ ಅವಧಿಯನ್ನು ವಿಸ್ತರಿಸಲಾಗಿದೆ.
1993 ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಡಿ ಜೈಲು ಶಿಕ್ಷೆಗೆ ಗುರಿಯಾಗಿ, ಪೆರೋಲ್ ಮೇಲೆ ಹೊರಬಂದಿರುವ ಸಂಜಯ್ ದತ್ ಅವರು ತಮ್ಮ ಪೆರೋಲ್ ಅವಧಿ ವಿಸ್ತರಿಸುವಂತೆ ಕೋರಿದ್ದರು.
ಕಳೆದ ಡಿಸೆಂಬರ್‌ನಲ್ಲಿ ಪುಣೆಯ ವಿಭಾಗೀಯ ಆಯುಕ್ತರು ಸಂಜಯ್ ದತ್‌ಗೆ 30 ದಿನಗಳ ಕಾಲ ಪೆರೋಲ್ ಮಂಜೂರು ಮಾಡಿದ್ದರು. ತದ ನಂತರ ಅವಧಿ ಮುಗಿಯುತ್ತಿದ್ದಂತೆ ಸಂಜಯ್ ದತ್ ಮತ್ತೆ ಪೆರೋಲ್ ವಿಸ್ತರಣಗೆ ಮನವಿ ಮಾಡಿದ ಹಿನ್ನಲೆಯಲ್ಲಿ, ಫೆಬ್ರವರಿ 21ರವರೆಗೆ ಪೆರೋಲ್ ಮಂಜೂರು ಮಾಡಲಾಗಿತ್ತು. ಆದರೆ ಈಗ ಮತ್ತೆ ಸಂಜಯ್‌ಗೆ ಪೆರೋಲ್ ವಿಸ್ತರಣೆ ಮಾಡಲಾಗಿದೆ.