ನಟಿ ರಮ್ಯಾ ಜತೆ ಮದ್ವೆಯಾಗಿರುವುದಾಗಿ ಹೇಳಿದ್ದ 'ಹುಚ್ಚ' ವೆಂಕಟೇಶ್ ಬಂಧನ
ಸಂಸದೆ ಹಾಗೂ ನಟಿ ರಮ್ಯಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ 'ಹುಚ್ಚ ವೆಂಕಟ್' ಚಿತ್ರದ..
ಬೆಂಗಳೂರು: ಸಂಸದೆ ಹಾಗೂ ನಟಿ ರಮ್ಯಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ 'ಹುಚ್ಚ ವೆಂಕಟ್' ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕ ನಟ ವೆಂಕಟೇಶ್ ಅವರನ್ನು ಬೆಂಗಳೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ರಮ್ಯಾ ಅವರನ್ನು ತಾನು ಬನಶಂಕರಿ ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿ ವೆಂಕಟೇಶ್ ಹೇಳಿಕೆ ನೀಡಿದ್ದರು.
ಈ ಸಂಬಂಧ ಎರಡು ದಿನಗಳ ಹಿಂದೆ ನಟಿ ರಮ್ಯಾ ಅವರು ವೆಂಕಟೇಶ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು 'ಹುಚ್ಚ' ವೆಂಕಟೇಶ್ನನ್ನು ಬಂಧಿಸಿದ್ದಾರೆ.
ಈ ವಿಷಯ ಕುರಿತು ಖಾಸಗಿ ಸುದ್ದಿವಾಹಿನಿಯಲ್ಲಿ ಚರ್ಚೆ ಮಾಡಲು ಕುಳಿತ್ತಿರುವಾಗಲೇ ಕಬ್ಬನ್ ಪಾರ್ಕ್ ಪೊಲೀಸರು ವೆಂಕಟೇಶನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ಹಲವು ಖಾಸಗಿ ಸುದ್ದಿವಾಹಿನಿಗೆ ತೆರಳಿ ರಮ್ಯ ನನ್ನ ಹೆಂಡತಿ ಎಂದು ಹೇಳಿದ್ದ ವೆಂಕಟ್ ಇಂದು ಸಹ ಮತ್ತೊಂದು ಸುದ್ದಿ ವಾಹಿನಿಯಲ್ಲಿ ಇದನ್ನೇ ಹೇಳಲು ಬಂದಿದ್ದಾಗ ಪೊಲೀಸರು ಬಂಧಿಸಿದ್ದಾರೆ.