ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ತನ್ನ ಸಚಿವ, ಸಂಸದರ ಮೇಲೆಯೇ 'ಕೈ'ಗೆ ಹಿಡಿತವಿಲ್ಲ: ಸುಷ್ಮಾ

ಕಾಂಗ್ರೆಸ್‌ಗೆ ತನ್ನ ಸ್ವಪಕ್ಷದ ಸಂಸದರು ಮತ್ತು ಸಚಿವರ ಮೇಲೆಯೆ ಹಿಡಿತವಿಲ್ಲ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಶನಿವಾರ ಟೀಕಿಸಿದ್ದಾರೆ...

Vishwanath S
Updated On : 22 Feb 2014, 3:48 am

ನವದೆಹಲಿ: ಕಾಂಗ್ರೆಸ್‌ಗೆ ತನ್ನ ಸ್ವಪಕ್ಷದ ಸಂಸದರು ಮತ್ತು ಸಚಿವರ ಮೇಲೆಯೆ ಹಿಡಿತವಿಲ್ಲ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಶನಿವಾರ ಟೀಕಿಸಿದ್ದಾರೆ.

15ನೇ ಲೋಕಸಭೆ ಅಧಿವೇಶನದ ವಿದಾಯ ದಿನವಾದ ಇಂದು ಪ್ರತಿಪಕ್ಷದ ನಾಯಕಿಯಾಗಿ ತಮ್ಮ ಕೊನೆಯ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣ ವಿಧೇಯಕ ಅಂಗೀಕಾರ ಸಂಬಂಧ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆದ ಅವಘಡಗಳಿಗೆ ತೀವ್ರ ವಿಷಾದ ವ್ಯಕ್ತಪಡಿಸಿದರು.

ಅಲ್ಲದೆ, ತೆಲಂಗಾಣ ಮಸೂದೆ ಅಂಗೀಕಾರಕ್ಕೆ ಮುಖ್ಯವಾಗಿ ಕಾಂಗ್ರೆಸ್ ಸಂಸದರೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ತಮ್ಮ ಸ್ವಪಕ್ಷದ ಸಂಸದರು ಮತ್ತು ಸಚಿವರನ್ನು ನಿಯಂತ್ರಿಸಲು ಸಾಧ್ಯವಾಗದ ಕಾಂಗ್ರೆಸ್‌ಗೆ ದೇಶ ಆಳುವ ನೈತಿಕತೆಯಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಕಳೆದ ಒಂದು ದಶಕದ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಮಿತಿ ಮೀರಿದೆ. ಯಾವುದೇ ಯೋಜನೆ ಕೈಗೊಂಡರು ಅಲ್ಲಿ ಕಾಂಗ್ರೆಸ್‌ನ ಭ್ರಷ್ಟಾಚಾರದ 'ಕೈ' ಕಾಣುತ್ತಿತ್ತು. ಇದಕ್ಕೆಲ್ಲ ಅಂತ್ಯವಾಡುವ ಕಾಲ ಬಂದಿದ್ದು, ಚುನಾವಣೆ ಬಳಿಕ ಭಾರತ ಕಾಂಗ್ರೆಸ್ ಮುಕ್ತ ದೇಶವಾಗಲಿದೆ ಎಂದು ಸುಷ್ಮಾ ಆಶಯ ವ್ಯಕ್ತಡಿಸಿದ್ದಾರೆ.

ಕಳೆದ ಮೂರು ಅಧಿವೇಶನಗಳು ತೆಲಂಗಾಣ ವಿವಾದದಲ್ಲೇ ಕೊನೆಯಾಯಿತು. ಪ್ರತಿ ಸಲದ ಅಧಿವೇಶನದ ಸಮಯದಲ್ಲೂ ಕಾಂಗ್ರೆಸ್‌ನ ಸಚಿವರು ಮತ್ತು ಸಂಸದರ ವಂಚನೆ ಪ್ರಕರಣಗಳು ಬಯಲಾಗಿ, ಈ ಪ್ರಕರಣಗಳ ವಾದ ವಿವಾದದಲ್ಲೇ ಅಧಿವೇಶನ ಅಂತ್ಯವಾಗುತ್ತಿತ್ತು ಎಂದು ದೂರಿದರು.

ಲೋಕಸಭೆ ವಿರೋಧ ಪಕ್ಷದ ನಾಯಕಿಯಾಗಿ ಉತ್ತಮ ಕಾರ್ಯನಿರ್ವಹಿಸುವುದರ ಬಗ್ಗೆ ನನಗೆ ಅಭಿಮಾನವಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಲೋಕಪಾಲ್ ಮತ್ತು ತೆಲಂಗಾಣ ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ ಎಂದು ಸುಷ್ಮಾ ಹರ್ಷ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement