ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದಲೈ ಲಾಮಾ-ಒಬಾಮ ಭೇಟಿಗೆ ಚೀನಾ ಆಕ್ರೋಶ

ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿಗೆ ಶನಿವಾರ ಚೀನಾ ಆಕ್ರೋಶ...

Vishwanath S
Updated On : 22 Feb 2014, 3:32 am

ಬೀಜಿಂಗ್: ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿಗೆ ಶನಿವಾರ ಚೀನಾ ಆಕ್ರೋಶ ವ್ಯಕ್ತಪಡಿಸಿದೆ.

ಒಬಾಮ ಮತ್ತು ದಲೈ ಲಾಮಾ ಅವರ ಭೇಟಿಯಾದ ಹಿನ್ನೆಲೆಯಲ್ಲಿ ಚೀನಾ ತನ್ನ ಅಸಮಧಾನ ವ್ಯಕ್ತಪಡಿಸಿದ್ದು, ಅಮೆರಿಕ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹಳಿಸಿದರೆ ಅದಕ್ಕೆ ಅಮೆರಿಕಾ ಕಾರಣ ಎಂದು ಚೀನಾ ದೂರಿದೆ.

ಇಂದು ಅಮೆರಿಕದ ಶ್ವೇತ ಭವನದಲ್ಲಿ ಒಬಾಮ ಅವರನ್ನು ದಲೈ ಲಾಮಾ ಭೇಟಿ ಮಾಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ಟಿಬೆಟ್ ಹಾಗೂ ಚೀನಾ ನಡುವಿನ ವಿಷಯದ ಬಗ್ಗೆ ಬೇರೆ ರಾಷ್ಟ್ರಗಳು ಮೂಗು ತೂರಿಸಬಾರದು ಎಂದು ಹೇಳಿದೆ.

ಇಬ್ಬರು ನಾಯಕರ ಚರ್ಚೆ ವೇಳೆ ಚೀನಾ ಹಾಗೂ ಟಿಬೆಟ್ ವಿಷಯ ಪ್ರಸ್ತಾಪವಾದರೆ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆ ಬೀಳಲಿದೆ. ಅಲ್ಲದೆ ತಮ್ಮ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಬಿರುಕು ಉಂಟಾಗಲಿದೆ. ಧಾರ್ಮಿಕ ಗುರುಗಳಾಗಿರುವ ದಲೈ ಲಾಮಾ ಅವರು ಚೀನಾ ವಿರೋಧಿ ಧೋರಣೆ ತೋರಿ ರಾಜಕೀಯ ಮಾಡುತ್ತಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಕೀನ್ ಗ್ಯಾಂಗ್ ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement