ಫೆ.25ಕ್ಕೆ ವಾರ್ಷಕ ಕಲಾ ಪ್ರದರ್ಶನ-2014
ಬೆಂಗಳೂರು: ಚಿತ್ರಕಲಾ ಮಹಾವಿದ್ಯಾಲಯ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್‌ನ ಸಹಯೋಗದಲ್ಲಿ ಇದೇ ಫೆಬ್ರುವರಿ 25ರಿಂದ ಮಾರ್ಚ್ 1ರವರೆಗೆ ಒಂದು ವಾರಗಳ ಕಾಲ ವಾರ್ಷಿಕ ಕಲಾ ಪ್ರದರ್ಶನ-2014 ನಡೆಯಲಿದೆ.
ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಫೆ.25ರಂದು ನಡೆಯುವ ವಾರ್ಷಿಕ ಕಲಾಪ್ರದರ್ಶನಕ್ಕೆ ಕಲಾ ವಿಮರ್ಶಕ ಸುರೇಶ್ ಜಯರಾಮ್ ಅವರು ಚಾಲನೆ ನೀಡಲಿದ್ದಾರೆ. ಡಾ.ಬಿ.ಎಲ್.ಶಂಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಲಾ ಪ್ರದರ್ಶನದಲ್ಲಿ ಬಿವಿಎ, ಎಂವಿಎ ಮತ್ತು ಪಿಜಿಡಿ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ ಕಲೆ ಮತ್ತು ಅನ್ವಯ ಕಲೆಯ ವಿಭಾಗದ ಕಲೆಗಳನ್ನು ಪ್ರದರ್ಶಿಸಲಿದ್ದಾರೆ.