ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಲ್‌ಪಿಜಿ ಬಳಕೆದಾರರಿಗೆ ಮುಷ್ಕರ ಬಿಸಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಎಲ್‌ಪಿಜಿ ವಿತರಕರ ಸಂಘ ಫೆ. 25 ರಂದು ದೇಶಾದ್ಯಂತ ಅನಿದೀಷ್ಟಾವಧಿ ಮುಷ್ಕರ ನಡೆಸಲಿದ್ದು,

Vishwanath S
Updated On : 23 Feb 2014, 2:06 am

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಎಲ್‌ಪಿಜಿ ವಿತರಕರ ಸಂಘ ಫೆ. 25 ರಂದು ದೇಶಾದ್ಯಂತ ಅನಿದೀಷ್ಟಾವಧಿ ಮುಷ್ಕರ ನಡೆಸಲಿದ್ದು, ಎಲ್‌ಪಿಜಿ ಬಳಕೆದಾರರಿಗೆ ಮುಷ್ಕರ ಬಿಸಿ ತಟ್ಟಲಿದೆ.

ಬೆಲೆ ನಿಗದಿ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಸರ್ಕಾರ ವಿರುದ್ಧ ಅನಿದೀಷ್ಟಾವಧಿ ಮುಷ್ಕರ ನಡೆಸಲು ವಿತರಕರ ಸಂಘ ಮುಂದಾಗಿದೆ ಎಂದು ಬೆಂಗಳೂರಿನಲ್ಲಿ ಎಲ್‌ಪಿಜಿ ವಿತರಕರ ಸಂಘದ ಕಾರ್ಯದರ್ಶಿ ಸತ್ಯನ್ ಅವರು ಹೇಳಿದ್ದಾರೆ.

ನಿಗದಿತ ಬೆಲೆ ಕಡ್ಡಾಯಗೊಳಿಸದೆ ಇರುವುದರಿಂದ ಎಲ್‌ಪಿಜಿ ವಿತರಕರಿಗೆ ಅನ್ಯಾಯವಾಗಿದೆ. ಹೀಗಾಗಿ ಸರ್ಕಾರ ವಿತರಕರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಹೊಸದಾಗಿ ಎಲ್‌ಪಿಜಿ ಸಿಲಿಂಡರ್ ವಿತರಣೆಗೆ ಲೈಸನ್ಸ್ ನೀಡಬಾರದು. ಈಗಿರುವ ಅಗ್ರಿಮೆಂಟ್‌ಗಳು 50 ವರ್ಷಗಳ ಹಳೆಯದಾಗಿದ್ದು, ಆದಷ್ಟು ಬೇಗ ಅಗ್ರಿಮೆಂಟ್‌ಗಳ ನವೀಕರಣಕ್ಕೆ ಮುಂದಾಗಬೇಕು. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಎಲ್‌ಪಿಜಿ ಸಿಲಿಂಡರ್ ವಿತರಕರ ಮುಷ್ಕರ ಹಿನ್ನೆಲೆಯಲ್ಲಿ ಫೆಬ್ರವರಿ 25 ರಿಂದ ಸಿಲಿಂಡರ್ ವಿತರಣೆ ಬಂದ್ ಆಗಲಿದ್ದು, ಇದರಿಂದ ಗ್ರಾಹಕರು ತೊಂದರೆ ಅನುಭವಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement