ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉಗ್ರರ ಅಡಗುದಾಣ ಮೇಲೆ ಪಾಕ್ ದಾಳಿ: 30 ಉಗ್ರರ ಹತ್ಯೆ

Vishwanath S
Updated On : 25 Feb 2014, 4:14 am

ಪೇಶಾವರ: ಉಗ್ರರ ಅಡಗುದಾಣಗಳಾದ ಉತ್ತರ ಮತ್ತು ದಕ್ಷಿಣ ವಜೀರಿಸ್ತಾನದ ಗಡಿ ಪ್ರದೇಶ ಶವಾಲ್ ಕಣಿವೆಯ ಮೇಲೆ ಪಾಕಿಸ್ತಾನದ ಯುದ್ದ ವಿಮಾನಗಳು ಮಂಗಳವಾರ ಭೀಕರ ಬಾಂಬ್ ದಾಳಿ ನಡೆಸಿದ್ದು, ಇದರಲ್ಲಿ ಕನಿಷ್ಠ 30 ಉಗ್ರರು ಹತರಾಗಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಪಾಕ್ ವಾಯುಪಡೆ ತಾಲಿಬಾನ್ ಉಗ್ರರ ಅಡಗುದಾಣಗಳ ಮೇಲೆ ಸತತವಾಗಿ ದಾಳಿ ನಡೆಸುತ್ತಿದ್ದು, ಇದರಲ್ಲಿ ಸುಮಾರು 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪಾಕ್ ಭದ್ರತಾ ಪಡೆ ಮೂಲಗಳು ತಿಳಿಸಿವೆ.

ಉತ್ತರ ವಜೀರಿಸ್ತಾದ ಘರಿಯೋಂ ಗ್ರಾಮದ ಉಗ್ರರ ನೆಲೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಉತ್ತರ ಮತ್ತು ದಕ್ಷಿಣ ವಜೀರಿಸ್ತಾನದ ನಡುವಣ ಪ್ರದೇಶವನ್ನು ಉಗ್ರರು ವಶಪಡಿಸಿಕೊಂಡು ತರಬೇತಿ ನೆಲೆಗಳನ್ನು ಸ್ಥಾಪಿಸಿಕೊಂಡು ಆತ್ಮಾಹುತಿ ಬಾಂಬರ್‌ಗಳಿಗೆ ತರಬೇತಿ ನೀಡಲಾಗುತ್ತಿತ್ತು ಎನ್ನಲಾಗಿದೆ.

ಗುಪ್ತಚರ ಮಾಹಿತಿ ಆಧರಿಸಿ ಪಾಕ್ ಮಿಲಿಟರಿ ಉಗ್ರರ ಸೀಮಿತ ನೆಲೆಗಳ ಮೇಲೆ ದಾಳಿಗಳನ್ನು ನಡೆಸುತ್ತಿವೆ. ಇತ್ತೀಚೆಗೆ ಪಾಕ್ ಭದ್ರತಾ ಪಡೆಗಳ 23 ಯೋಧರನ್ನು ಉಗ್ರರು ಹತ್ಯೆ ಮಾಡಿದ್ದ ಹಿನ್ನೆಲೆಯಲ್ಲಿ ಉಗ್ರರ ವಿರುದ್ಧ ಪಾಕ್ ವೈಮಾನಿಕ ದಾಳಿ ಆರಂಭಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement