ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಲ್ಮಾನ್ 'ಹಿಟ್ ಅಂಡ್ ರನ್‌': ಮಾ. 26ರಿಂದ ಮರು ವಿಚಾರಣೆ

ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧದ 11 ವರ್ಷಗಳ ಹಳೆಯದಾದ ಹಿಟ್ ಅಂಡ್ ರನ್ ಪ್ರಕರಣದ ಮರು...

Vishwanath S
Updated On : 25 Feb 2014, 3:28 am

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧದ 11 ವರ್ಷಗಳ ಹಳೆಯದಾದ ಹಿಟ್ ಅಂಡ್ ರನ್ ಪ್ರಕರಣದ ಮರು ವಿಚಾರಣೆ ಮಾರ್ಚ್ 26ರಿಂದ ನಡೆಯಲಿದೆ.

ಹಿಟ್ ಅಂಡ್ ರನ್ ಪ್ರಕರಣದ ವಿಚಾರಣೆಯನ್ನು ಹೊಸದಾಗಿ ನಡೆಸುವಂತೆ ಮುಂಬೈನ ಸೆಷನ್ಸ್ ಕೋರ್ಟ್ ಕಳೆದ ಡಿ. 26 ರಂದು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾಕ್ಷ್ಯಗಳ ಹೇಳಿಕೆ ದಾಖಲು ಮತ್ತು ಪಾಟೀ ಸವಾಲು ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಪುನರಾರಂಭಗೊಳ್ಳಲಿವೆ.

ಮಾರ್ಚ್ 26 ರಂದು ಪ್ರಕರಣದ ಮರು ವಿಚಾರಣೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಎಲ್ಲಾ 17 ಸಾಕ್ಷಿಗಳಿಗೆ ಖುದ್ದು ಹಾಜರಾಗುವಂತೆ ಸಮನ್ಸ್ ನೀಡಲು ಕೋರ್ಟ್ ನಿರ್ಧರಿಸಿದೆ.

ಸಲ್ಮಾನ್ ವಿರುದ್ಧ ಆರಂಭಿಕ ಹಂತದಲ್ಲಿ ಹೊರಸಿಲಾಗಿದ್ದ 'ನಿರ್ಲಕ್ಷ್ಯದ ಚಾಲನೆ' ಆರೋಪವನ್ನು, ಪ್ರಕರಣದ ವಿಚಾರಣೆಯ ಮಧ್ಯಭಾಗದಲ್ಲಿ 'ಉದ್ದೇಶಪೂರ್ವಕವಲ್ಲದ ಕೊಲೆ' ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬದಲಿಸಿ, ಪ್ರಕರಣವನ್ನು ಸೆಷನ್ಸ್ ನ್ಯಾಯಾಲಯಕ್ಕೆ ಒಪ್ಪಿಸಿತ್ತು. ಇದರ ವಿರುದ್ಧ ಸಲ್ಮಾನ್ ಖಾನ್ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿದ್ದರು.

ಉದ್ದೇಶಪೂರ್ವಕವಲ್ಲದ ಕೊಲೆ ಆರೋಪದಡಿ ಗರಿಷ್ಠ 10 ವರ್ಷ ಶಿಕ್ಷೆ ವಿಧಿಸಬಹುದಾಗಿದ್ದರಿಂದ, ಇಡೀ ಪ್ರಕರಣದ ವಿಚಾರಣೆಯನ್ನು ಹೊಸದಾಗಿ ನಡೆಸಬೇಕು ಎಂದು ಸಲ್ಮಾನ ಖಾನ್ ಮತ್ತೊಮ್ಮೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸದಾಗಿ ವಿಚಾರಣೆ ನಡೆಸಲು ನ್ಯಾಯಾಧೀಶರು ಆದೇಶಿಸಿದ್ದರು.

2002ರ ಸೆ.28 ರಂದು ಸಲ್ಮಾನ್ ಖಾನ್ ಅವರು ರಸ್ತೆ ಬದಿ ಮಲಗಿದ್ದವರ ಮೇಲೆ ಕಾರು ಚಲಾಯಿಸಿ ಪರಾರಿಯಾಗಿದ್ದರು. ಈ ಘಟನೆಯಲ್ಲಿ ಒಬ್ಬ ವ್ಯಕ್ತ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement