ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗೋಪಾಲನ್ ಮಾಲ್ ನಲ್ಲಿ ಉಗ್ರಂ 'ದಾಳಿ'

ನಾಯಕ ಶ್ರೀಮುರಳಿ ಮರಳಿ ಹೊಸ ಅವತಾರದಲ್ಲಿ ಕಾಣಿಸಿಕೊಂಡ ಚಿತ್ರ 'ಉಗ್ರಂ'. ಚಿತ್ರ ರಾಜ್ಯಾದ್ಯಂತ ಹೊಸ ಅಲೆಯನ್ನೇ ಹುಟ್ಟುಹಾಕಿದೆ...

Rashmi Kasaragodu
Updated On : 1 Mar 2014, 1:54 am
ನಾಯಕ ಶ್ರೀಮುರಳಿ ಮರಳಿ ಹೊಸ ಅವತಾರದಲ್ಲಿ ಕಾಣಿಸಿಕೊಂಡ ಚಿತ್ರ 'ಉಗ್ರಂ'. ಚಿತ್ರ ರಾಜ್ಯಾದ್ಯಂತ ಹೊಸ ಅಲೆಯನ್ನೇ ಹುಟ್ಟುಹಾಕಿದೆ, ಜನ ಉಗ್ರಂ ನ ಶ್ರೀಮುರಳಿಯನ್ನು ಎಷ್ಟು ಮೆಚ್ಚಿದ್ದಾರೆ ಎನ್ನುವುದಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಗೋಪಾಲನ್ ಆರ್ಕೇಡ್ ಸಾಕ್ಷಿಯಾಗಿತ್ತು. ಹಾಗೆ ನೋಡಿದರೆ 'ಅದು ಅಭಿಮಾನಿಗಳ ಗಾಳಿಯೂ ಹೌದು, ದಾಳಿಯೂ ಹೌದು' ಎನ್ನುವಂತೆ ಚಿತ್ರಮಂದಿರ ಭರ್ತಿಯಾಗಿತ್ತು.
ಈ ಸಂಧರ್ಭದಲ್ಲಿ ಮಾತಿಗೆ ಸಿಕ್ಕ ಶ್ರೀಮುರಳಿಯ ಜೊತೆ ಪುಟ್ಟ ಮಾತು ಕತೆ:

ಹಾಗಿದ್ದರೆ ತಾಯಿಯವರ ಆಶೀರ್ವಾದ ದಿಂದ, ಉಗ್ರಂ ಜೋರಾಗೇ ದುಡ್ಡು ಮಾಡಿರಬೇಕು!? ಎಷ್ಟು ಕಲೆಕ್ಷನ್ ಮಾಡಿದೆ ನಿಮ್ಮ ಚಿತ್ರ?

Advertisement

Advertisement

ಅದನ್ನು ನಿರ್ಮಾಪಕರ ಹತ್ತಿರವೇ ಕೇಳಬೇಕು. ಆದರೆ ಜನರ ಅಭಿಪ್ರಾಯ, ಪ್ರೀತಿಯ ಕಲೆಕ್ಷನ್ ಹೆಚ್ಚಾಗುತ್ತಾ ಇದೆ.

ಆದರೆ ಈ ಪ್ರೀತಿ ಇಷ್ಟು ವರ್ಷಗಳ ಚಿತ್ರ ಜೀವನದಲ್ಲಿ ತುಂಬ ಕಷ್ಟ ಪಟ್ಟರೂ ಸಿಗಲಿಲ್ಲ...?

ಅದೆಲ್ಲವುದಕ್ಕೂ ನನ್ನ ತಪ್ಪು ಆಯ್ಕೆಗಳೇ ಕಾರಣ, ಬೇರೆ ಏನೂ ಅಲ್ಲ! ನಾನೇ ಹೊಣೆ... ಆದರೆ ಈ ಕುಂಟುತ್ತ ನಡೆದ ಎಂಟು ವರ್ಷಗಳ ಜೀವನ ಇದೆಯಲ್ಲ, ಅದನ್ನು ಖಂಡಿತಾ ಮರೆಯಲಾರೆ. ಆದರೆ ಈ ಎಲ್ಲ ಸಂದರ್ಭದಲ್ಲಿ ಜೊತೆಗಿದ್ದ ಕುಟುಂಬ, ಸ್ನೇಹಿತರು, ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದ ಚಿತ್ರೋದ್ಯಮ ಎಲ್ಲರಿಗೂ ನಾನು ಋಣಿ...
ನನ್ನ ಜೀವನದ ಅತಿ ಪ್ರಮುಖ ಅಂಶ ನನ್ನ ಕುಟುಂಬ. ಮನೆ ನನ್ನ ಪಾಲಿಗೆ ಸ್ವರ್ಗ. ನನ್ನ ಇಬ್ಬರು ಮುದ್ದಾದ ಮಕ್ಕಳು, ಪತ್ನಿಯನ್ನು ಕಂಡಾಗ ನನ್ನೆಲ್ಲ ಒತ್ತಡಗಳನ್ನು ಮರೆತು ಬಿಡುತ್ತೇನೆ. ನನ್ನ ಮಕ್ಕಳ ಜೊತೆಗಿನ ಕ್ಷಣ ತರುವ ಸಂತೋಷ ಬಹುಷಃ ಯಾವುದರಿಂದಲೂ ದಕ್ಕದು.

ಅಂದರೆ 'ಉಗ್ರಂ' ಮನೆಗೆ ಹೋದ ತಕ್ಷಣ "ಶಾಂತಂ'?
ಹಹಹ..   ನಿಜವಾಗಿಯೂ  ಹಾಗೇನೆ!

ಚಿತ್ರ ತಾಂತ್ರಿಕವಾಗಿ ತುಂಬ ಚೆನ್ನಾಗಿದೆ ಎಂಬ ಅಭಿಪ್ರಾಯವಿದೆ? ಚಿತ್ರದ ಛಾಯಾಗ್ರಹಣ ನಿಜವಾಗಿಯೂ ಯಾರು ಮಾಡಿದ್ದು?
ಚಿತ್ರಕ್ಕೆ ಮೂರು ಮಂದಿ ಕ್ಯಾಮರಾಮನ್ ಗಳು. ಮೂವರೂ ತಮ್ಮ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ . ರವಿವರ್ಮನ್, ರವಿಕುಮಾರ್ ಸಾನಾ, ಭುವನ್.

"ಉಗ್ರಂ'ನ ನಿಮ್ಮ ಅಭಿನಯ ಹೊಸ ಜನರೇಶನ್ ಗೆ ತುಂಬಾ ಇಷ್ಟವಾದಂತಿದೆ?
ಎಲ್ಲರಲ್ಲೂ ಮೆಚ್ಚುಗೆ ಗಳಿಸಿದೆ ಅಂದರೆ ತಪ್ಪಿಲ್ಲ,... ಡಯಲಾಗ್  ಗಳನ್ನೂ ಜನ ಹಾಗಾಗೇ ಉರು ಹೊಡೆದಂತೆ ಹೇಳುತ್ತಿದ್ದಾರೆ... ಈ ಪ್ರೀತಿ ಹೀಗೇ ಉಳಿಸಿಕೊಳುವ ದೊಡ್ಡ ಜವಾಬ್ದಾರಿ ಇದೆ. ಮುಂದಿನ ಚಿತ್ರಗಳಲ್ಲಿ ನನ್ನ ಹೊಣೆ ಹೆಚ್ಚಿದೆ, ಅದಕ್ಕೆ ಕಾರಣ ಜನರ ಪ್ರೀತಿ. ..
ತುಂಬಾ ಒತ್ತಡದಲ್ಲಿದ್ದೆ ... ಅದಕ್ಕೇ 'ಬೌಲಿಂಗ್' ಮಾಡುತ್ತಲೇ ಮಾತಾಡುತ್ತೇನೆ ಅಂದ ಶ್ರೀಮುರಳಿ ಹೆಚ್ಚೆಚ್ಚು 'ಬೌಲಿಂಗ್' ಮಾಡಿ ದಾಖಲೆಗಳನ್ನು ಉರುಳಿಸುತ್ತಿರಲಿ ಎಂದು ಹಾರೈಸುತ್ತಿದ್ದಂತೆ ಅಭಿಮಾನಿಗಳು ತಮ್ಮ ದಾಳಿ ಮುಂದುವರಿಸಿದರು. ನಂತರ
ಹರಿಪ್ರಿಯಾ ಮತ್ತು ಶ್ರೀಮುರಳಿ ಜನರ ಜತೆ ಬೌಲಿಂಗ್‌ನಲ್ಲಿ ಭಾಗವಹಿಸಿದ್ದಲ್ಲದೆ ಉಗ್ರಂ ಚಿತ್ರವನ್ನು ಪ್ರೇಕ್ಷಕರ ಮಧ್ಯೆ ಕುಳಿತು ವೀಕ್ಷಿಸಿದರು.

ಡಾವೆಂಕಿ
ಕನ್ನಡಪ್ರಭ ಡಾಟ್ ಕಾಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement