ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಾರೆಂಟ್ ರದ್ದಿಗೆ ಸುಬ್ರತೋ ರಾಯ್ 'ಸುಪ್ರೀಂ' ಗೆ ಮೊರೆ

ಬಂಧನದ ಭೀತಿ ಎದುರಿಸುತ್ತಿರುವ ಸಹಾರಾ ಮುಖ್ಯಸ್ಥ ಸುಬ್ರತೋ ರಾಯ್ ಅವರು ತಮ್ಮ ವಿರುದ್ಧ ಜಾರಿಯಾಗಿದ್ದ ಜಾಮೀನು ರಹಿತ...

Vishwanath S
Updated On : 27 Feb 2014, 7:24 am

ನವದೆಹಲಿ: ಬಂಧನದ ಭೀತಿ ಎದುರಿಸುತ್ತಿರುವ ಸಹಾರಾ ಮುಖ್ಯಸ್ಥ ಸುಬ್ರತೋ ರಾಯ್ ಅವರು ತಮ್ಮ ವಿರುದ್ಧ ಜಾರಿಯಾಗಿದ್ದ ಜಾಮೀನು ರಹಿತ ಬಂಧನ ವಾರೆಂಟ್‌ನ್ನು ರದ್ದುಪಡಿಸುವಂತೆ ಕೋರಿ ಗುರುವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಸಹರಾ ಸಂಸ್ಧೆಯ ಹೂಡಿಕೆದಾರರಿಗೆ ಷೇರು ಹಣ ಹಿಂದುರಿಗಿಸದ ಪ್ರಕರಣಕ್ಕೆ ಸಂಬಂಧಸಿದಂತೆ ವಿಚಾರಣೆಗೆ ಖುದ್ದು ಹಾಜರಾಗವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ ವಿಚಾರಣೆಗೆ ಸತತವಾಗಿ ಹಾಜರಾಗದ ಹಿನ್ನೆಲೆಯಲ್ಲಿ ಸುಬ್ರತೋ ರಾಯ್ ವಿರುದ್ಧ ಸುಪ್ರೀಂಕೋರ್ಟ್ ನಿನ್ನೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೊಲೀಸರು ಇಂದು ಸುಬ್ರತೋ ರಾಯ್ ಬಂಧಿಸಲು ಅವರ ನಿವಾಸಕ್ಕೆ ತೆರಳಿದ್ದರು.

ಬಂಧನದ ಭೀತಿ ಎದುರಿಸುತ್ತಿರುವ ಸುಬ್ರತೋ ರಾಯ್ ತಮ್ಮ ವಿರುದ್ಧ ಜಾರಿ ಮಾಡಿರುವ ವಾರೆಂಟ್‌ನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಬರಿಗೈಲಿ ವಾಪಸ್ಸಾದ ಪೊಲೀಸರು
ಸುಬ್ರತೋ ರಾಯ್ ಅವರನ್ನು ಬಂಧಿಸಿ ಮಾರ್ಚ್ 4 ರಂದು ಕೋರ್ಟ್‌ಗೆ ಹಾಜರುಪಡಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೊಲೀಸರು ಲಖನೌನಲ್ಲಿರುವ ಸುಬ್ರತೋ ರಾಯ್‌ರ ನಿವಾಸಕ್ಕೆ ಇಂದು ತೆರಳಿದ್ದರು. ಆದರೆ ರಾಯ್ ಅವರು ಮನೆಯಲ್ಲಿ ಇರದಿದ್ದ ಕಾರಣ ಬರಿಗೈಯಲ್ಲಿ ವಾಪಸಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement