ನಾಳೆ 'ಶಬರಿಯ ಅವಸರ', 'ಹರಿವ ತೊರೆ' ಪುಸ್ತಕ ಬಿಡುಗಡೆ
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನಾಲಯ ಹೊರ ತರುತ್ತಿರುವ 'ಶಬರಿಯ ಅವಸರ ಮತ್ತು ಹರಿವ ತೊರೆ'ಪುಸ್ತಕ ಬಿಡುಗಡೆ ಸಮಾರಂಭ ನಾಳೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಲೇಖಕಿ ಚೇತನಾ ತೀರ್ಥಹಳ್ಳಿಯವರ 'ಶಬರಿಯ ಅವಸರ' ಕವನ ಸಂಕಲನ ಹಾಗೂ ಕವಿ ಹೃದಯಶಿವ ಅವರ 'ಹರಿವ ತೊರೆ' ಕಿರುಗವಿತೆ ಪುಸ್ತಕಗಳು ಬಿಡುಗಡೆಗೊಳ್ಳಲಿದೆ.
ಜೊತೆಗೆ ಎಸ್. ಅನಂತನಾರಾಯಣ ಅವರು ಅನುವಾದಿಸಿರುವ ದೊಡ್ಡಕಾಡಿನಲ್ಲಿ ಪುಟ್ಟಮನೆ, ಹುಲ್ಲುಗಾವಲಿನಲ್ಲಿ ಪುಟ್ಟಮನೆ, ರೈತರ ಹುಡುಗ, ಪ್ಲಂ ನದಿಯ ತೀರದಲ್ಲಿ, ಚಳಿಯ ಸುಳಿಯಲ್ಲಿ, ಸಿಲ್ವರ್ ಲೇಕ್ ದಡದಲ್ಲಿ, ಹುಲ್ಲುಗಾವಲಿನಲ್ಲಿ ಪುಟ್ಟ ಪಟ್ಟಣ, ಆ ಸೊಗಸಿನ ಬಂಗಾರದ ದಿನಗಳು, ಹಾಗೂ ಕೆ.ಪಿ. ಈಶಾನ್ಯೆ ಅನುವಾದಿಸಿರುವ ಮೊದಲ ನಾಲ್ಕು ವರ್ಷಗಳು ಪುಸ್ತಕಗಳು ಬಿಡುಗಡೆಗೊಳ್ಳಲಿವೆ.
ಸಾಹಿತಿ ಡಾ. ಸಿದ್ಧಲಿಂಗಯ್ಯ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಲೇಖಕ ಜೋಗಿ ಅವರು ಭಾಗವಹಿಸಲಿದ್ದಾರೆ.