ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಹುಮತ ಸಾಬೀತು ಪಡಿಸಿದ ಕೇಜ್ರಿವಾಲ್

ದೆಹಲಿ ವಿಧಾನಸಭೆಯ ಅಧಿಕಾರದ ಗದ್ದುಗೆ ಏರಿದ್ದ ಆಮ್ ಆದ್ಮಿ ಪಕ್ಷ(ಎಎಪಿ)ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಬಹುಮತ...

Vishwanath S
Updated On : 2 Jan 2014, 7:21 am

ನವದೆಹಲಿ: ದೆಹಲಿ ವಿಧಾನಸಭೆಯ ಅಧಿಕಾರದ ಗದ್ದುಗೆ ಏರಿದ್ದ ಆಮ್ ಆದ್ಮಿ ಪಕ್ಷ(ಎಎಪಿ)ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಬಹುಮತ ಸಾಬೀತು ಪಡಿಸಿದ್ದಾರೆ.

ಸರಳ ಬಹುಮತ ಸಾಬೀತು ಪಡಿಸಲು ಎಎಪಿಗೆ 70ರ ಪೈಕಿ 36 ಮತಗಳ ಅವಶ್ಯಕತೆ ಇತ್ತು. ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಎಎಪಿ ಪರ 37 ಮತಗಳು ದಾಖಲಾಗಿದೆ. ಹೀಗಾಗಿ ಬಹುಮತ ಸಾಬೀತುಪಡಿಸುವಲ್ಲಿ ಕೇಜ್ರಿವಾಲ್ ಯಶ್ವಸಿಯಾಗಿದ್ದಾರೆ.

ವಿಶ್ವಾಸಮತ ಯಾಚನೆ ಹಿನ್ನೆಲೆ ಸಂಜೆ 5 ಗಂಟೆಯ ನಂತರ ಶಾಸಕರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಎಎಪಿ ಪರ 37 ಮತಗಳು ದಾಖಲಾಗಿದ್ದು, ಎಎಪಿ ವಿರುದ್ಧ 32 ಮತಗಳು ದಾಖಲಾಗಿವೆ.

ದೆಹಲಿ ವಿಧಾನಸಭೆಯ 70 ಕ್ಷೇತ್ರಗಳ ಪೈಕಿ 28 ಸ್ಥಾನಗಳನ್ನು ಪಡೆದಿದ್ದ ಎಎಪಿ, ಕಾಂಗ್ರೆಸ್‌ನ ಬೇಷರತ್ತು ಬೆಂಬಲದಿಂದಾಗಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು ಇಂದು ದಿನಾಂಕ ನಿಗದಿ ಪಡಿಸಿದ್ದರು. ಬಹುಮತ ಸಾಬೀತು ಪಡಿಸುವ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಇಂದು ಮಧ್ಯಾಹ್ನ 2.30ರಲ್ಲಿ ಸಚಿವ ಸಿಸೋಡಿಯಾ ವಿಶ್ವಾಸಮತ ಯಾಚನೆಗೆ ಪ್ರಸ್ತಾವನೆ ಮಂಡಿಸಿದರು.

ವಿಧಾನಸಭೆಯಲ್ಲಿ 31 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿ ಮುಂದುವರೆಯಲಿದ್ದು, ಎಎಪಿಗೆ ಬೇಷರತ್ತು ಬೆಂಬಲ ನೀಡಿದ್ದ ಕಾಂಗ್ರೆಸ್ ಎಎಪಿ ಪರ ಮತ ಚಲಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement