ಪೆಟ್ರೋಲ್ ಲೀ.ಗೆ 75 ಪೈಸೆ, ಡೀಸೆಲ್ ಲೀ.ಗೆ 50 ಪೈಸೆ ಏರಿಕೆ
ತೈಲ ಮಾರಾಟ ಕಂಪನಿಗಳು ಶುಕ್ರವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿವೆ. ಇದೀಗ ಪೆಟ್ರೋಲ್ ಲೀ.ಗೆ 75 ಪೈಸೆ...
ನವದೆಹಲಿ: ತೈಲ ಮಾರಾಟ ಕಂಪನಿಗಳು ಶುಕ್ರವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿವೆ. ಇದೀಗ ಪೆಟ್ರೋಲ್ ಲೀ.ಗೆ 75 ಪೈಸೆ, ಡೀಸೆಲ್ ಲೀ.ಗೆ 50 ಪೈಸೆ ಏರಿಕೆ ಮಾಡಿದ್ದು, ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.
ದೆಹಲಿಯಲ್ಲಿ ಇದೀಗ ಪೆಟ್ರೋಲ್ ಬೆಲೆ ಲೀ.ಗೆ 71.50 ಪೈಸೆ ಆಗಿದ್ದು, ಪರಿಷ್ಕೃತ ದರ 72.25 ಆಗಲಿದೆ.
ಅದೇ ವೇಳೆ ಲೀ.ಡೀಸೆಲ್ ಬೆಲೆ ದೆಹಲಿಯಲ್ಲಿ ರು.53.80 ಪೈಸೆ ಯಿಂದ ರು. 54.30 ಪೈಸೆಯಾಗಿ ಏರಿಕೆಯಾಗಿದೆ.
ಪರಿಷ್ಕೃತ ದರ ಸ್ಥಳೀಯ ತೆರಿಗೆ ಮತ್ತು ವ್ಯಾಟ್ ಹೊರತು ಪಡಿಸಿರುವ ದರವಾಗಿದೆ.