ಪ್ರಿಯಾ ಪತಿಯಾದ ಜಾನ್ ಅಬ್ರಹಾಂ
ಬಾಲಿವುಡ್ ನಟ ಜಾನ್ ಅಬ್ರಹಾಂ ತನ್ನ ಪ್ರಿಯತಮೆ ಪ್ರಿಯಾ ರಂಚಾಲ್ನೊಂದಿಗೆ ಮದುವೆ ಮಾಡಿಕೊಂಡಿದ್ದಾರೆ ಎಂಬುದು ಸದ್ಯದ ಸುದ್ದಿ....
ಮುಂಬೈ: ಬಾಲಿವುಡ್ ನಟ ಜಾನ್ ಅಬ್ರಹಾಂ ತನ್ನ ಪ್ರಿಯತಮೆ ಪ್ರಿಯಾ ರಂಚಾಲ್ನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ ಎಂಬುದು ಸದ್ಯದ ಸುದ್ದಿ.
ಟ್ವೀಟರ್ನಲ್ಲಿ ತನ್ನ ಅಭಿಮಾನಿಗಳಿಗೆ ಹೊಸ ವರುಷದ ಶುಭಾಶಯ ಕೋರಿದ ಜಾನ್, ಪ್ರಿಯಾ ತನ್ನ ಅರ್ಧಾಂಗಿ ಎಂದು ಹೇಳಿಕೊಂಡಿದ್ದಾರೆ.
2014 ಎಲ್ಲರಿಗೂ ಶುಭ ತರಲಿ, ಈ ವರುಷ ನಿಮಗೆ ಪ್ರೀತಿ, ಅದೃಷ್ಟ ಹಾಗು ಸಂತೋಷವನ್ನು ತರಲಿ -ಪ್ರೀತಿಯಿಂದ ಜಾನ್ ಮತ್ತು ಪ್ರಿಯಾ ಅಬ್ರಹಾಂ ಎಂದು ಜಾನ್ ಟ್ವೀಟಿಸಿದ್ದಾರೆ.
ಬಹಳ ಕಾಲದಿಂದಲೂ ಗರ್ಲ್ಫ್ರೆಂಡ್ ಆಗಿದ್ದ ಪ್ರಿಯಾ ಜತೆಗೆ ಅಬ್ರಹಾಂ ಗುಪ್ ಚುಪ್ ಆಗಿ ಮದುವೆ ಆಗಿರುವುದರಿಂದ ಈ ಮದುವೆ ಬಗ್ಗೆ ಎಲ್ಲಿಯೂ ಸುದ್ದಿಯಾಗಲಿಲ್ಲ.
41ರ ಹರೆಯದ ಜಾನ್ ಮದುವೆ ಬಗ್ಗೆ ಚರ್ಚೆಯಾಗುತ್ತಿದ್ದಂತೆಯೇ, ಜಾನ್ ತಾನು ಮದುವೆ ವಿಷಯವನ್ನು ಈಗ ಬಹಿರಂಗ ಪಡಿಸಿದ್ದಾರೆ.
ಮಾಡೆಲ್ ಆಗಿ ವೃತ್ತಿ ಆರಂಭಿಸಿದ ಜಾನ್ ನಟನೆ ಮೂಲಕ ಹೆಸರು ಗಳಿಸಿದ್ದು, ನಂತರ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಿಯಾ ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಅಂತೂ ಒಟ್ಟಿನಲ್ಲಿ ತನ್ನ ಗರ್ಲ್ಫ್ರೆಂಡ್ನ್ನು ಮದುವೆಯಾಗುವ ಮೂಲಕ ದಾಂಪತ್ಯಕ್ಕೆ ಕಾಲಿರಿಸಿದ ಜಾನ್-ಪ್ರಿಯಾ ದಂಪತಿಗಳಿಗೆ ಶುಭ ಹಾರೈಕೆಗಳು.