'ಸಲಿಂಗಕಾಮ' ತೀರ್ಪು: ಕೇಂದ್ರ ಸಚಿವರ ಪ್ರತಿಕ್ರಿಯೆಗೆ ಸುಪ್ರೀಂ ಅಸಮಧಾನ
ಕಲಂ 377ರ ಪ್ರಕಾರ ಸಲಿಂಗಕಾಮ ಅಜೀವ ಕಾರಾಗೃಹ ವಾಸದ ಶಿಕ್ಷೆಗೆ ಅರ್ಹವಾಗಿರುವ ಅಪರಾಧ, ಆದ್ದರಿಂದ ಸಲಿಂಗಕಾಮಕ್ಕೆ ...
ನವದೆಹಲಿ: ಕಲಂ 377ರ ಪ್ರಕಾರ ಸಲಿಂಗಕಾಮ ಅಜೀವ ಕಾರಾಗೃಹ ವಾಸದ ಶಿಕ್ಷೆಗೆ ಅರ್ಹವಾಗಿರುವ ಅಪರಾಧ, ಆದ್ದರಿಂದ ಸಲಿಂಗಕಾಮಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್ ತೀರ್ಪಿಗೆ ಕೇಂದ್ರ ಸಚಿವರು ನೀಡಿರುವ ಪ್ರತಿಕ್ರಿಯೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಧಾನ ವ್ಯಕ್ತ ಪಡಿಸಿದೆ.
ಸುಪ್ರೀಂ ಕೋರ್ಟ್ನ ಈ ತೀರ್ಪಿಗೆ ಸಲಿಂಗಕಾಮಿಗಳು ಮತ್ತು ಎನ್ಜಿಒಗಳು ತೀವ್ರವಾಗಿ ಪ್ರತಿಭಟಿಸಿದ್ದವು. ಅದೇ ವೇಳೆ ಹಿರಿಯ ಸಚಿವರು ಮತ್ತು ಕೆಲವೊಂದು ರಾಜಕಾರಣಿಗಳು ಸುಪ್ರೀಂ ತೀರ್ಪು ಸರಿಯಲ್ಲ, ಸಲಿಂಗಕಾಮವನ್ನು ನ್ಯಾಯಬದ್ಧಗೊಳಿಸಬೇಕೆಂದು ಒತ್ತಾಯಿಸಿದ್ದರು.
ಪ್ರಸ್ತುತ ಸುಪ್ರೀಂಕೋರ್ಟ್ ತೀರ್ಪು ನಮ್ಮನ್ನು 1860ರ ಕಾಲಘಟ್ಟಕ್ಕೆ ಕರೆದೊಯ್ದಿದೆ ಎಂದು ವಿತ್ತ ಸಚಿವ ಪಿ.ಚಿದಂಬರಂ ಹೇಳಿದ್ದರು.
ಕೆಲವೊಂದು ಸಚಿವರ ಪ್ರತಿಕ್ರಿಯೆಗಳು ಅನುಚಿತವಾಗಿದ್ದು, ಇನ್ನು ಕೆಲವನ್ನು ಒಪ್ಪಲಾಗುವುದಿಲ್ಲ. ಇಂಥಾ ಹೇಳಿಕೆಗಳ ಬಗ್ಗೆ ನಮಗೆ ಅಸಮಧಾನವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದಾಗ್ಯೂ, ಇಂಥಾ ಹೇಳಿಕೆ ನೀಡಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದ ನ್ಯಾಯಾಲಯ, ಉನ್ನತ ಹುದ್ದೆಯಲ್ಲಿರುವವರು ಈ ರೀತಿ ಹೇಳಿಕೆ ನೀಡುವಾಗ ಎಚ್ಚರ ವಹಿಸಬೇಕು ಎಂದು ಹೇಳಿದೆ.