5 ಬೆಡ್ ರೂಂನ ಮನೆಗೆ ಹೋಗುವ ನಿರ್ಧಾರ ಕೈಬಿಟ್ಟ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ವಿರೋಧದ ಹಿನ್ನೆಲೆಯಲ್ಲಿ ಐದು ಬೆಡ್ ರೂಂನ ಸರ್ಕಾರಿ ಬಂಗ್ಲೆಗೆ...
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ವಿರೋಧದ ಹಿನ್ನೆಲೆಯಲ್ಲಿ ಐದು ಬೆಡ್ ರೂಂನ ಸರ್ಕಾರಿ ಬಂಗ್ಲೆಗೆ ಸ್ಥಳಾಂತರವಾಗುವ ತಮ್ಮ ನಿರ್ಧಾರವನ್ನು ಶನಿವಾರ ಕೈ ಬಿಟ್ಟಿದ್ದಾರೆ.
ಸರ್ಕಾರ ನೀಡಿರುವ ಐದು ಬೆಡ್ ರೂಂನ ಡ್ಯುಪ್ಲೆಕ್ಸ್ ಮನೆಗೆ ನಾನು ಹೋಗುತ್ತಿಲ್ಲ. ಬದಲಾಗಿ ತಮಗೆ ಸಣ್ಣ ಮನೆಯನ್ನು ನೀಡುವಂತೆ ಸರ್ಕಾರಕ್ಕೆ ಕೇಳಿಕೊಂಡಿರುವುದಾಗಿ ಕೇಜ್ರಿವಾಲ್ ಅವರು ಇಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ನಿನ್ನೆಯಿಂದ ನನ್ನ ಸ್ನೇಹಿತರು ಮತ್ತು ಬೆಂಬಲಿಗರು ನೀವು ಐದು ಬೆಡ್ ರೂಂನ ಮನೆಗೆ ಹೋಗಬೇಡಿ ಎಂದು ಕರೆ ಮಾಡಿ, ಎಸ್ಎಂಎಸ್ ಮಾಡಿ ಹೇಳುತ್ತಿದ್ದಾರೆ. ಹೀಗಾಗಿ ನಾನು ಐದು ಬೆಡ್ ರೂಂನ ಮನೆಗೆ ಹೋಗುವ ನಿರ್ಧಾರವನ್ನು ಕೈ ಬಿಟ್ಟಿದ್ದು, ತಮಗೆ ಯಾವುದಾದರು ಒಂದು ಸಣ್ಣ ಮನೆ ಒದಗಿಸುವಂತೆ ಕೇಳಿಕೊಂಡಿರುವುದಾಗಿ ಕೇಜ್ರಿವಾಲ್ ತಿಳಿಸಿದರು.
ನನಗೆ ಬೇರೆ ವ್ಯವಸ್ಥೆ ಕಲ್ಪಿಸುವವರೆಗೆ ನಾನು ಘಾಝಿಯಾಬಾದ್ ನಿವಾಸದಿಂದಲೇ ಕೆಲಸ ಮಾಡುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪ್ರತಿಪಕ್ಷಗಳಿಂದ ಟೀಕೆ:
ಸರ್ಕಾರಿ ಬಂಗ್ಲೆ ನಿರಾಕರಿಸಿದ್ದ ಕೇಜ್ರಿವಾಲ್ ಅವರು ಐದು ಬೆಡ್ ರೂಂಗಳುಳ್ಳ ಡ್ಯೂಪ್ಲೆಕ್ ಮನೆಗೆ ಸ್ಥಳಾಂತರಗೊಳ್ಳುವ ನಿರ್ಧಾರವನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.