ಅಮೆರಿಕಾದಲ್ಲಿ ಭಾರತೀಯ ಚಿತ್ರ ಪ್ರದರ್ಶನಕ್ಕೆ ನಿರ್ಬಂಧ
ನವದೆಹಲಿ: ಅಮೆರಿಕಾದ ಮೇಲೆ ಮತ್ತೊಮ್ಮೆ ಒತ್ತಡ ಹೇರಲು ಮುಂದಾಗಿರುವ ಭಾರತ, ಅಮೆರಿಕಾದ ಚಿತ್ರಮಂದಿಗಳಲ್ಲಿ ಭಾರತೀಯ ಸಿನಿಮಾಗಳನ್ನು ಪ್ರದರ್ಶಿಸದಂತೆ ಅಮೆರಿಕಾದ ಭಾರತೀಯ ರಾಯಭಾರಿ ಕಚೇರಿಗೆ ಶನಿವಾರ ಸೂಚನೆ ನೀಡಿದೆ.
ಅಮೆರಿಕಾದ ಚಿತ್ರಮಂದಿರಗಳಲ್ಲಿ ಅನುಮತಿ ಇಲ್ಲದೆ ಭಾರತೀಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಅಲ್ಲದೆ ಅನುಮತಿ ಇಲ್ಲದೆ ಯಾವುದೇ ಸಿನಿಮಾಗಳಕ್ಕೆ ಪ್ರದರ್ಶನಕ್ಕೆ ಅವಕಾಶ ನೀಡದಂತೆ ರಾಯಭಾರಿ ಕಚೇರಿಗೆ ನೋಟಿಸ್ ನೀಡಿದೆ. ಅಲ್ಲದೆ ಜನವರಿ 20ರೊಳಗೆ ನವಿಕೃತ ಪರವಾನಗಿ ನೀಡುವಂತೆ ಸೂಚಿಸಿದೆ.
ಭಾರತೀಯ ಉಪ ರಾಯಭಾರಿ ದೇವಯಾನಿ ಖೋಬ್ರಾಗಡೆ ಅವರಿಗೆ ಸೂಕ್ತ ನ್ಯಾಯ ಸಿಗಬೇಕು. ಅಲ್ಲದೆ ಅವರನ್ನು ಅಮೆರಿಕಾ ಕ್ಷಮಾಪಣೆ ಕೇಳಬೇಕು ಎಂದು ಭಾರತ ಪಟ್ಟುಹಿಡಿದಿದೆ.
ವೀಸಾ ವಂಚನೆ ಪ್ರಕರಣದಲ್ಲಿ ಅಮೆರಿಕಾ ಪೊಲೀಸರು ದೇವಯಾನಿ ಅವರನ್ನು ಬಂಧಿಸಿದ್ದು, ವಿಚಾರಣೆ ನೆಪದಲ್ಲಿ ಖೋಬ್ರಾಗಡೆ ಅವರನ್ನು ಹೀನಾಯವಾಗಿ ನಡೆಸಿಕೊಂಡಿದ್ದರು. ಅಲ್ಲದೆ ಆಕೆಯನ್ನು ಮಾದಕ ದ್ರವ್ಯ ವ್ಯಸನಿಗಳು, ಮತ್ತು ಕ್ರಿಮಿನಲ್ಗಳನ್ನು ಇರಿಸಿದ್ದ ಕೋಣೆಯಲ್ಲಿ ಇರಿಸಿತ್ತು.