ಎಲ್ಪಿಜಿ ಸಬ್ಸಿಡಿ ಸಿಲಿಂಡರ್ ಸಂಖ್ಯೆ ಹೆಚ್ಚಿಸುವ ಪ್ರಸ್ತಾಪ ಇಲ್ಲ: ಮೊಯ್ಲಿ
ಕೊಚ್ಚಿ: ಎಲ್ಪಿಜಿ ಸಬ್ಸಿಡಿ ಸಿಲಿಂಡರ್ ಸಂಖ್ಯೆಯನ್ನು 9ರಿಂದ 12ಕ್ಕೆ ಹೆಚ್ಚಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ಅವರು ಶನಿವಾರ ಹೇಳಿದ್ದಾರೆ.
'ನಮ್ಮ ಮುಂದೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ. ಶೇ.90ರಷ್ಟು ಗ್ರಾಹಕರಿಗೆ 9 ಸಬ್ಸಿಡಿ ಸಿಲಿಂಡರ್ ಸಾಕಾಗುತ್ತದೆ. ಶೇ.10ರಷ್ಟು ಗ್ರಾಹಕರು ಮಾತ್ರ 9ಕ್ಕಿಂತ ಹೆಚ್ಚು ಸಿಲಿಂಡರ್ಗಳನ್ನು ಬಳಸುತ್ತಿದ್ದಾರೆ' ಎಂದು ಮೊಯ್ಲಿ ವರದಿಗಾರರಿಗೆ ತಿಳಿಸಿದರು.
ಗುರುವಾರವಷ್ಟೆ ವಿತ್ತ ಸಚಿವ ಪಿ.ಚಿದಂಬರಂ ಅವರು, ಸಬ್ಸಿಡಿ ಸಿಲಿಂಡರ್ ಸಂಖ್ಯೆಯನ್ನು 12ಕ್ಕೆ ಏರಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ಪರಿಶೀಲಿಸಲಿದೆ ಎಂದು ದೆಹಲಿ ಹೇಳಿದ್ದರು.