ತೇಜ್ಪಾಲ್ ಬಂಧನ ಅವಧಿ ವಿಸ್ತರಿಸಿದ ನ್ಯಾಯಾಲಯ
ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹಿನ್ನೆಲೆ ಬಂಧಿತರಾಗಿರುವ ತೆಹೆಲ್ಕಾ ನಿಯತಕಾಲಿಕೆ ಮಾಜಿ...
ಪಣಜಿ: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹಿನ್ನೆಲೆ ಬಂಧಿತರಾಗಿರುವ ತೆಹೆಲ್ಕಾ ನಿಯತಕಾಲಿಕೆ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಪಣಜಿ ನ್ಯಾಯಾಲಯ ಶನಿವಾರ ವಿಸ್ತರಿಸಿದೆ.
ಜಾಮೀನಿಗಾಗಿ ತೇಜ್ಪಾಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಇಂದು ಪಣಜಿ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ವೇಳೆ ಗೋವಾ ಪೊಲೀಸರು ತೇಜ್ಪಾಲ್ರಿಗೆ ಜಾಮೀನು ನೀಡಬಾರದು. ಅಲ್ಲದೆ ಅವರ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸಬೇಕು ಎಂದು ಕೋರ್ಟ್ಗೆ ಮನವಿ ಮಾಡಿದರು.
ವಿಚಾರಣೆ ನಡೆಸಿದ ಕೋರ್ಟ್ ಪೊಲೀಸರ ಮನವಿಯನ್ನು ಪುರಸ್ಕರಿಸಿದರು. ಆದರೆ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಬದಲಾಗಿ 10 ದಿನಗಳಿಗೆ ಮಾತ್ರ ವಿಸ್ತರಿಸಿದೆ.
ಗೋವಾದ ಪಂಚತಾರ ಹೋಟೆಲ್ವೊಂದರಲ್ಲಿ ನಡೆದ ತೆಹೆಲ್ಕಾ ನಿಯತಕಾಲಿಕೆಯ ಸಮಾರಂಭವೊಂದರಲ್ಲಿ ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡದ ಆರೋಪ ತೇಜ್ಪಾಲ್ ಮೇಲಿದೆ. ಈ ಆರೋಪ ಹಿನ್ನೆಲೆಯಲ್ಲಿ ಕಳೆದ ವರ್ಷ ನವೆಂಬರ್ 30ರಂದು ತೇಜ್ಪಾಲ್ರನ್ನು ಗೋವಾ ಪೊಲೀಸರು ಬಂಧಿಸಿದ್ದರು.