ಆ್ಯಶಸ್ ಟೆಸ್ಟ್ ಸರಣಿ: ಆಸ್ಟ್ರೇಲಿಯಾಕ್ಕೆ ಮಣಿದ ಇಂಗ್ಲೆಂಡ್
ಸತತವಾಗಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಪ್ರವಾಸಿ ಇಂಗ್ಲೆಂಡ್ ತಂಡ ಸಿಡ್ನಿಯಲ್ಲಿ ನಡೆದ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಕ್ರಿಕೆಟ್...
ಸಿಡ್ನಿ: ಸತತವಾಗಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಪ್ರವಾಸಿ ಇಂಗ್ಲೆಂಡ್ ತಂಡ ಸಿಡ್ನಿಯಲ್ಲಿ ನಡೆದ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 281 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, 5-0 ಅಂತರದಿಂದ ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ ಕ್ಲೀನ್‌ಸ್ವೀಪ್ ಮಾಡಿದೆ. ಈ ಮೂಲಕ ಆಸ್ಟ್ರೇಲಿಯ ತಂಡದ ನಾಯಕ ಮೈಕಲ್ ಕ್ಲಾರ್ಕ್ ಆ್ಯಶಸ್ ಟೆಸ್ಟ್ ಸರಣಿ ಗೆದ್ದ ಮೂರನೇ ನಾಯಕ ಎನ್ನುವ ಸಾಧನೆಗೂ ಪಾತ್ರರಾಗಿದ್ದಾರೆ.
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಮೊದಲ ಇನ್ನಿಂಗ್ಲ್‌ನಲ್ಲಿ ಆಸ್ಟ್ರೇಲಿಯಾ ತಂಡ 326 ರನ್ ಗಳಿಸಿತ್ತು. ಆದರೆ ಇಂಗ್ಲೆಂಡ್‌ನ್ನು ಬರೀ 155 ರನ್‌ಗಳಿಗೆ ನಿಯಂತ್ರಿಸಿದ ಆಸಿಸ್ ವೇಗಿಗಳು ತಂಡಕ್ಕೆ 177 ರನ್‌ಗಳ ಮುನ್ನಡೆಯನ್ನು ಒದಗಿಸಿಕೊಟ್ಟಿದ್ದರು.
ದ್ವೀತಿಯ ಇನ್ನಿಂಗ್ಸ್‌ನಲ್ಲಿ ರೋಜರ್ಸ್ ಸಿಡಿಸಿದ ಶತಕ(119)ದ ನೆರವಿನಿಂದ ಆಸ್ಟ್ರೇಲಿಯಾ 276 ರನ್ ಗಳಿಸಿತು. ಹೀಗಾಗಿ ಇಂಗ್ಲೆಂಡ್‌ಗೆ ಗೆಲ್ಲಲ್ಲು 453 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಇದನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ 166 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಯಿತು.
ಆಸಿಸ್ ಪರ ರಿಯಾನ್ ಹಾರಿಸ್ ಒಟ್ಟು 8 ವಿಕೆಟ್‌ಗಳನ್ನು ಕಬಳಿಸಿದರು. ವೇಗಿ ಮಿಚೆಲ್ ಜಾನ್ಸನ್ 6 ವಿಕೆಟ್‌ಗಳನ್ನು ಪಡೆದರು. ಹೆಚ್ಚಿನ ವಿಕೆಟ್ ಪಡೆದ ರಿಯಾನ್ ಹಾರಿಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಸರಣಿಯಲ್ಲಿ ಅತ್ಯಧಿಕ ವಿಕೆಟ್‌ಗಳನ್ನು ಪಡೆದ ಮಿಚೆಲ್ ಜಾನ್ಸನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.