ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಿಎಸ್‌ಎಲ್‌ವಿ-ಡಿ5 ಯಶಸ್ವಿ ಉಡಾವಣೆ

ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಕೆಯ ಜಿಎಸ್‌ಎಲ್‌ವಿ-ಡಿ5 ರಾಕೆಟ್ ಅನ್ನು ಭಾನುವಾರ ಇಸ್ರೋ ಯಶಸ್ವಿಯಾಗಿ ಉಡಾಯಿಸಿದೆ...

Vishwanath S
Updated On : 5 Jan 2014, 5:11 am

ಶ್ರೀಹರಿಕೋಟ(ಆಂಧ್ರಪ್ರದೇಶ): ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಕೆಯ ಜಿಎಸ್‌ಎಲ್‌ವಿ-ಡಿ5 ರಾಕೆಟ್ ಅನ್ನು ಭಾನುವಾರ ಇಸ್ರೋ ಯಶಸ್ವಿಯಾಗಿ ಉಡಾಯಿಸಿದೆ.

ಆಂಧ್ರಪ್ರದೇಶ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‌ಎಲ್‌ವಿ-ಡಿ5 ರಾಕೆಟ್ ಅನ್ನು ಸಂಜೆ 4.18ಕ್ಕೆ ಸರಿಯಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಭಕ್ಕೆ ಯಶಸ್ವಿಯಾಗಿ ಉಡಾಯಿಸಿತ್ತು. ಇತ್ತೀಚೆಗಷ್ಟೆ ಮಂಗಳಯಾನ ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಿದ್ದ ಇಸ್ರೋ, ಮತ್ತೊಮ್ಮೆ ರಾಕೆಟ್ ಜಿಎಸ್‌ಎಲ್‌ವಿ-ಡಿ5ಯನ್ನು ಯಶಸ್ವಿಯಾಗಿ ಉಡಾಯಿಸಿದ ಯಶಸ್ಸು ಇಸ್ರೋಗೆ ಧಕ್ಕಿದೆ.

ದೇಶಿಯವಾಗಿ ನಿರ್ಮಿಸಿರುವ ಕ್ರಯೋಜೆನಿಕ್ ಎಂಜಿನ್ ಅಳವಡಿಸಿರುವ ಭಾರತದ ಪ್ರಮುಖ ಜಿಎಸ್‌ಎಲ್‌ವಿ-ಡಿ5 ರಾಕೆಟ್ 'ಜಿಸ್ಯಾಟ್ 14' ಎಂಬ ಸಂವಹನ ಉಪಗ್ರಹವನ್ನು ಹೊತ್ತೊಯ್ಯುತ್ತಿದೆ. 49.13 ಮೀಟರ್ ಉದ್ದದ ಜೆಎಸ್‌ಎಲ್‌ವಿ-ಡಿ5 ರಾಕೆಟ್ ಸುಮಾರು 414.75 ಟನ್ ತೂಕ ಹೊತ್ತು ಗಗನಕ್ಕೆ ಹಾರುವ ಸಾಮಥ್ಯ ಹೊಂದಿದೆ. ಇದು  1980 ಕೆಜಿ ತೂಕದ ಜಿಸ್ಯಾಟ್-14 ಉಪಗ್ರಹವನ್ನು ಹೊತ್ಯೊಯ್ದಿದೆ.

ಜಿಸ್ಯಾಟ್-14 ಉಪಗ್ರಹ ದೂರ-ಶಿಕ್ಷಣ ಮತ್ತು ಕುಗ್ರಾಮಗಳಿಗೂ ವೈದ್ಯಕೀಯ ಸೌಲಭ್ಯ ಪೂರೈಸುವ ದೂರ-ವೈದ್ಯಕೀಯ ಸೇವೆಗಳನ್ನು ಈ ಉಪಗ್ರಹ ಒದಗಿಸಲಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ಜಿಎಸ್‌ಎಲ್‌ವಿ-ಡಿ5 ಉಪಗ್ರಹ ಯಶಸ್ವಿ ಉಡಾವಣೆ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿದ ಇಸ್ರೋ ಅಧ್ಯಕ್ಷ ರಾಧಕೃಷ್ಣನ್ ಅವರು. ಇದು ಇಸ್ರೋ ಇತಿಹಾಸದಲ್ಲಿ ಮಹತ್ತರ ಮೈಲಿಗಲ್ಲು ಎಂದು ಹೇಳಿದರು. ಉಪಗ್ರಹ ಉಡಾವಣೆ ಯಶಸ್ಸು ತಂಡದ ಶ್ರಮಕ್ಕೆ ಸಂದ ಜಯ. ಯಶಸ್ವಿಯಾಗಿ ಉಪಗ್ರಹ ಉಡಾವಣೆ ಮಾಡಿದ ಇಸ್ರೋ ತಂಡವನ್ನು ಅಭಿನಂದಿಸಿದರು.

ಜಿಎಸ್‌ಎಲ್‌ವಿ-ಡಿ5 ಉಪಗ್ರಹ ಯಶಸ್ವಿ ಉಡಾವಣೆಯಿಂದ ಇಸ್ರೋ ಕೇಂದ್ರದಲ್ಲಿ ಸಂತಸ ಮನೆ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement