ಬೆಂಬಲ ಹಿಂಪಡೆಯುವುದಾಗಿ ಬೆದರಿಕೆ; ಕುಮಾರ್ ವಿಶ್ವಾಸ್ ಕ್ಷಮೆಯಾಚನೆ
ಆಮ್ ಆದ್ಮಿ ಪಕ್ಷಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯುವುದಾಗಿ ಜನತಾದಳ (ಸಂಯುಕ್ತ ) ಶಾಸಕ ಶೊಯೇಬ್ ಇಕ್ಬಾಲ್ ಬೆದರಿಕೆ...
ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯುವುದಾಗಿ ಜನತಾದಳ (ಸಂಯುಕ್ತ ) ಶಾಸಕ ಶೊಯೇಬ್ ಇಕ್ಬಾಲ್ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಎಎಪಿ ನಾಯಕ ಕುಮಾರ್ ವಿಶ್ವಾಸ್ ಕ್ಷಮೆಯಾಚಿಸಿದ್ದಾರೆ.
ಯಾವುದಾದರೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದ್ದರೆ ಅದಕ್ಕಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ ಎಂದು ವಿಶ್ವಾಸ್ ಹೇಳಿದ್ದಾರೆ.
ಯಾವುದೇ ಜನರ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಾಗಿರಲಿಲ್ಲ. ಇಕ್ಬಾಲ್ ಈಗ ಹೇಳುತ್ತಿರುವ ವೀಡಿಯೋ ತುಣುಕನ್ನು ಬಿಡುಗಡೆಗೆ ಮುನ್ನ ಸಂಪಾದನೆ ಮಾಡಲಾಗಿದೆ.
ಅದೇ ವೇಳೆ ದೆಹಲಿಯಲ್ಲಿ ಆಪ್ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯಬೇಕೋ ಬೇಡವೋ ಎನ್ನುವುದು ಅವರಿಗೆ ಬಿಟ್ಟದ್ದು ಎಂದು ವಿಶ್ವಾಸ್ ಹೇಳಿದ್ದಾರೆ.
ಮೊಹರಂ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕುಮಾರ್ ವಿಶ್ವಾಸ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಇಲ್ಲವಾದರೆ ನಾನು ಆಪ್ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುತ್ತೇನೆ ಎಂದು ಇಕ್ಬಾಲ್ ಬೆದರಿಕೆಯೊಡ್ಡಿದ್ದರು.
ಇದೀಗ ವಿಶ್ವಾಸ್ ಅವರ ಕ್ಷಮೆಯಾಚನೆಯಿಂದ ಈ ಜಟಾಪಟಿ ಸದ್ಯ ತಣ್ಣಗಾಗಿದೆ.