ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭೂಷಣ್ ಹೇಳಿಕೆ ಬಗ್ಗೆ ಆಪ್ ಮೌನ

ಆಮ್ ಆದ್ಮಿ ಪಕ್ಷದ ಹಿರಿಯ ನೇತಾರ ಪ್ರಶಾಂತ್ ಭೂಷಣ್ ಕಾಶ್ಮೀರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವಿಷಯದ ಬಗ್ಗೆ ಸದ್ಯ ಆಪ್ ...

Rashmi Kasaragodu
Updated On : 6 Jan 2014, 5:29 am

ನವದೆಹಲಿ: ಆಮ್ ಆದ್ಮಿ ಪಕ್ಷದ ಹಿರಿಯ ನೇತಾರ ಪ್ರಶಾಂತ್ ಭೂಷಣ್ ಕಾಶ್ಮೀರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವಿಷಯದ ಬಗ್ಗೆ ಸದ್ಯ ಆಪ್ ಮೌನ ವಹಿಸಿದೆ.

ಕಾಶ್ಮೀರದಲ್ಲಿ ಸೇನಾ ನಿಯೋಜನೆ ಬಗ್ಗೆ ಪ್ರಜಾಭಿಮತದ ಮೂಲಕ ತೀರ್ಮಾನ ತೆಗೆದುಕೊಳ್ಳಬೇಕೆಂದು ಪ್ರಶಾಂತ್ ಭೂಷಣ್ ಹೇಳಿಕೆ  ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆಂತರಿಕ ಭದ್ರತೆ ಒದಗಿಸುವುದು ಕಾನೂನು ಮತ್ತು ನಿಯಮದ ಪ್ರಕಾರ. ಅದಲ್ಲದೆ ಕಾಶ್ಮೀರದಲ್ಲಿ ಸೇನಾ ನಿಯೋಜನೆ ಮಾಡಲು ಪ್ರಜಾಭಿಮತ ಕೇಳಬೇಕಾಗಿಲ್ಲ ಎಂದು ಹೇಳಿದ್ದಾರೆ.

ಆಂತರಿಕ ಭದ್ರತೆಗೆ ಬೆದರಿಕೆ ಇದ್ದರೆ ಮಾತ್ರ ದೇಶದಲ್ಲಿ ಸೇನೆ ನಿಯೋಜನೆ ಮಾಡಬೇಕಾಗುತ್ತದೆ. ಈ ಬಗ್ಗೆ ಪ್ರಜಾಭಿಮತ ಸಂಗ್ರಹಿಸಬೇಕಾದ ಅಗತ್ಯವಿಲ್ಲ. ಅಲ್ಲಿನ ಜನರ ಭಾವನೆಗಳಿಗೂ ನಾವು ಮನ್ನಣೆ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅದೇ ವೇಳೆ ಈ ಬಗ್ಗೆ ಪ್ರಜಾಭಿಮತ ಸಂಗ್ರಹಕ್ಕೆ ಎಎಪಿ ಸಮ್ಮತಿಯಿಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement