ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಟ್ನಾ ಸಾಹಿಬ್ ಗುರುದ್ವಾರದಲ್ಲಿ ಸಿಖ್ ಗುಂಪುಗಳ ನಡುವೆ ಘರ್ಷಣೆ

ಮಂಗಳವಾರ ಪಾಟ್ನಾ ಸಾಹಿಬ್ ಗುರುದ್ವಾರದಲ್ಲಿ ಎರಡು ಸಿಖ್ ಗುಂಪುಗಳ ನಡುವೆ ನಡೆದ ಸಂಘರ್ಷದಲ್ಲಿ ಮೂವರು ಗಂಭೀರ ಗಾಯ...

Rashmi Kasaragodu
Updated On : 7 Jan 2014, 2:26 am

ಪಾಟ್ನಾ: ಮಂಗಳವಾರ ಪಾಟ್ನಾ ಸಾಹಿಬ್ ಗುರುದ್ವಾರದಲ್ಲಿ ಎರಡು ಸಿಖ್ ಗುಂಪುಗಳ ನಡುವೆ ನಡೆದ ಸಂಘರ್ಷದಲ್ಲಿ ಮೂವರು ಗಂಭೀರ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ ಗುರುದ್ವಾರ ಪ್ರಬಂಧಕ್ ಸಮಿತಿ ಮತ್ತು ಬಾಲ್ ಲೀಲಾ ಸಮಿತಿ ನಡುವೆ ಘರ್ಷಣೆಯೇರ್ಪಟ್ಟಿದೆ.

ನೂತನ ಗ್ರಾಂಥಿ ಚುನಾವಣೆಯ ವಿಚಾರದಲ್ಲಿ ಈ ಎರಡೂ ಗುಂಪುಗಳು ಹೊಡೆದಾಡಿಕೊಂಡಿವೆ ಎಂದು ಹೇಳಲಾಗಿದೆ.

ಮೊದ ಮೊದಲು ವಾಕ್ ತರ್ಕದಿಂದ ಆರಂಭವಾದ ಜಗಳ ಕೊನೆಗೆ ಖಡ್ಗ ಹಿಡಿದು ಕಿತ್ತಾಡಿಕೊಳ್ಳವ ಸ್ಥಿತಿಗೆ ಬಂದಾಗ ಪರಿಸ್ಥಿತಿ ಇನ್ನೂ ಉದ್ವಿಗ್ನಗೊಂಡಿತು. ಕೂಡಲೇ ಪಾಟ್ನಾ ಸಾಹಿಬ್ ಗುರುದ್ವಾರ ಸಮಿತಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಸಿಖ್ ಸಮುದಾಯವಿಂದು ಜಗತ್ತಿನಾದ್ಯಂತ ಪ್ರಕಾಶ್ ಪರ್ವ ಆಚರಿಸುತ್ತಿರುವ ಈ ವೇಳೆ ಇಂಥಾ ಘಟನೆ ನಡೆದಿರುವುದು ವಿಷಾದನೀಯ ಎಂದು ಸಿಖ್ ಸಮುದಾಯ ಪ್ರತಿಕ್ರಿಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement