ಕೇವಲ 10ರು.ಗಳಿಗಾಗಿ ವ್ಯಕ್ತಿಯೋರ್ವನ ಕೊಲೆ
ಹತ್ತು ಲಕ್ಷವಲ್ಲ, ಹತ್ತು ಸಾವಿರವೂ ಅಲ್ಲ. ಕೇವಲ 10ರು.ಗಳಿಗಾಗಿ ವ್ಯಕ್ತಿಯೋರ್ವನನ್ನು ಕೊಲೆಗೈದಿರುವ ಘಟನೆ ಬಿಹಾರದ...
ಪಾಟ್ನಾ: ಹತ್ತು ಲಕ್ಷವಲ್ಲ, ಹತ್ತು ಸಾವಿರವೂ ಅಲ್ಲ. ಕೇವಲ 10ರು.ಗಳಿಗಾಗಿ ವ್ಯಕ್ತಿಯೋರ್ವನನ್ನು ಕೊಲೆಗೈದಿರುವ ಘಟನೆ ಬಿಹಾರದ ಕಟಿಹಾರ್ ಎಂಬಲ್ಲಿ ಬುಧವಾರ ನಡೆದಿದೆ.
ಗುಟ್ಕಾ ಖರೀದಿಸಲು 10ರು. ನೀಡಲು ನಿರಾಕರಿಸಿದ ದೀಪಕ್ ಕುಮಾರ್ ಯಾದವ್ ಎಂಬುವವರನ್ನು ನಾಲ್ವರು ಕೊಲೆ ಮಾಡಿದ್ದಾರೆ.
ಗುಟ್ಕಾ ಖರೀದಿಸಲು 10ರು. ನೀಡು ಎಂದು ದೀಪಕ್ಗೆ ನಾಲ್ವರು ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಹಣ ನೀಡಲು ನಿರಾಕರಿಸಿದ ದೀಪಕ್ಗೆ ನಾಲ್ವರು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.