ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಡೆಹ್ರಾಡೂನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ: 9 ಸಾವು

26 ಮಂದಿಯನ್ನು ಬಲಿತೆಗೆದುಕೊಂಡ ನಾಂದೇಡ್ ಎಕ್ಸ್‌ಪ್ರೆಸ್ ದುರಂತ ಮಾಸುವ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಂದು...

Lingaraj Badiger
Updated On : 8 Jan 2014, 4:25 am

ಥಾಣೆ: 26 ಮಂದಿಯನ್ನು ಬಲಿತೆಗೆದುಕೊಂಡ ನಾಂದೇಡ್ ಎಕ್ಸ್‌ಪ್ರೆಸ್ ದುರಂತ ಮಾಸುವ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದ್ದು, ಘಟನೆಯಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ.

ಮಹಾರಾಷ್ಟ್ರದ ಥಾಣೆ ಬಳಿ ಇಂದು ಬೆಳಗಿನ 3.30ರ ಸುಮಾರಿಗೆ ಬಾಂದ್ರಾ-ಡೆಹ್ರಾಡೂನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 9 ಪ್ರಯಾಣಿಕರು ಸಜೀವ ದಹನವಾಗಿದ್ದು, 20ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ನಿನ್ನೆ ರಾತ್ರಿ ಮುಂಬೈನ ಬಾಂದ್ರಾದಿಂದ ಹೊರಟ್ಟಿದ್ದ ರೈಲು ಇಂದು ಬೆಳಗಿನ ಜಾವ ಮಹಾರಾಷ್ಟ್ರದ ಥಾಣೆ ಬಳಿ ರೈಲಿನ ಎಸ್-2, ಎಸ್-3 ಮತ್ತು ಎಸ್-4 ಕೋಚ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ ಮತ್ತು ಸಾವಿನ ಸಂಖ್ಯೆ ಇನ್ನು ಹೆಚ್ಚುವ ಸಾಧ್ಯತೆ ಇದೆ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ  5 ಲಕ್ಷ ರುಪಾಯಿ ಪರಿಹಾರ ಘೋಷಿಸಲಾಗಿದೆ. ಸ್ಥಳಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ರೈಲು ದುರಂತಕ್ಕೆ ಇನ್ನು ನಿಖರವಾದ ಕಾರಣ ತಿಳಿದು ಬಂದಿಲ್ಲ.

ರೈಲು ದುರಂತಗಳು
- 2013. ಡಿ.28, ಬೆಂಗಳೂರು ನಾಂದೇಡ್ ಎಕ್ಸ್ಪ್ರೆಸ್ ದುರಂತ-26 ಸಾವು

-  2013, ಆ.19 - ಬಿಹಾರದಲ್ಲಿ ರಾಜ್ಯರಾಣಿ ಎಕ್ಸ್ಪ್ರೆಸ್ ದುರಂತ - 35 ಸಾವು

-  2012, ಜೂ.30 - ನೆಲ್ಲೂರು ಬಳಿ ದೆಹಲಿ - ತಮಿಳುನಾಡು ಎಕ್ಸ್ಪ್ರೆಸ್ ದುರಂತ - 35 ಬಲಿ

-  2012, ಮೇ 22 - ಅನಂತಪುರ ಬಳಿ ಬೆಂಗಳೂರು - ಹಂಪಿ ಎಕ್ಸ್ಪ್ರೆಸ್ ದುರಂತ - 25 ಬಲಿ

-  2012, ಮಾ.20 - ಹಥ್ರಾಸ್ ಬಳಿ ಮಥುರಾ - ಕಾಸ್ಗಂಜ್ ರೈಲು ದುರಂತ - 15 ಬಲಿ

-  2011, ಜು. 7 - ಮಲ್ಪಾ ಠಾಣೆ ಬಳಿ ಹಳಿ ತಪ್ಪಿದ ಕಲ್ಕಾ ಮೇಲ್ - 71 ಸಾವು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement