ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಹಿಳೆಗೆ ವೈನ್ ಸೇವನೆಗೆ ಒತ್ತಾಯಿಸಲು ಸಾಧ್ಯವಿಲ್ಲ: ನ್ಯಾ.ಗಂಗೂಲಿ

ನನ್ನ ಹೆಂಡತಿಯೂ ಸೇರಿದಂತೆ ಯಾವುದೇ ಮಹಿಳೆಗೂ ವೈನ್ ಸೇವಿಸು ಎಂದು ಬಲವಂತಿಸಲು ಸಾದ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ...

Mainashree
Updated On : 8 Jan 2014, 5:31 am

ಕೋಲ್ಕತಾ: ನನ್ನ ಹೆಂಡತಿಯೂ ಸೇರಿದಂತೆ ಯಾವುದೇ ಮಹಿಳೆಗೂ ವೈನ್ ಸೇವಿಸು ಎಂದು ಬಲವಂತಿಸಲು ಸಾದ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಮೂರ್ತಿ ಎ.ಕೆ ಗಂಗೂಲಿ ಬುಧವಾರ ಹೇಳಿದ್ದಾರೆ.

ನಾನು ಯಾವುದೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗಂಗೂಲಿ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ನನ್ನ ಮೇಲೆ ಮಾಡುತ್ತಿರುವ ಸುಳ್ಳು ಆರೋಪಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನನ್ನ ಕುಟುಂಬದ ಸದಸ್ಯರಿಗೂ ಹೆಚ್ಚು ನೋವುಂಟಾಗಿದೆ ಎಂದು ನ್ಯಾ. ಗಂಗೂಲಿ ತಿಳಿಸಿದ್ದಾರೆ.

ಮಹಿಳೆಗೆ ವೈನ್ ಕುಡಿ ಎಂದು ಬಲವಂತಿಸಲು ಸಾಧ್ಯವೇ? ವೈನ್ ಇರಲಿ, ಟೀ ಅಥವಾ ಕಾಫಿಯನ್ನಾ ಕುಡಿ ಎಂದು ನನ್ನ ಹೆಂಡತಿಗೂ ಒತ್ತಾಯಿಸಲು ಸಾಧ್ಯವಿಲ್ಲ. ಇನ್ನೂ ಬೇರೆ ಮಹಿಳೆಗೆ ಒತ್ತಡ ಹೇರಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಗಂಗೂಲಿ ಅವರು ವೈನ್ ಕುಡಿಯುವಂತೆ ಬಲವಂತ ಮಾಡಿದ್ದರು ಎಂದು ಕಾನೂನು ವಿದ್ಯಾರ್ಥಿನಿ ತನಿಖಾ ಪೀಠಕ್ಕೆ ಹೇಳಿಕೆ ನೀಡಿದ್ದರು.

ನಾನು ನನ್ನ ವಿದ್ಯಾರ್ಥಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ ಹಾಗೆ, ನನ್ನ ಮೇಲೆ ಮಾಡಿರುವುದು ಸುಳ್ಳು ಆರೋಪವಾಗಿರುವುದರಿಂದ ನಾನು ಜೈಲಿಗೂ ಹೋಗುವುದಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

ಆದಾಗ್ಯೂ, ಗಂಗೂಲಿ ಅವರ ವಜಾಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement