ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಜಾಫರನಗರ ಗಲಭೆ: ತನಿಖಾ ಅಧಿಕಾರಿಗೆ ಸಮನ್ಸ್ ಜಾರಿ

ಮುಜಾಫರನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಅಧಿಕಾರಿಗೆ ಸ್ಥಳೀಯ ನ್ಯಾಯಾಲಯ ಬುಧವಾರ ಸಮನ್ಸ್ ಜಾರಿ ಮಾಡಿದೆ...

Mainashree
Updated On : 8 Jan 2014, 4:23 am

ಮುಜಾಫರ್‌ನಗರ: ಮುಜಾಫರನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಅಧಿಕಾರಿಗೆ ಸ್ಥಳೀಯ ನ್ಯಾಯಾಲಯ ಬುಧವಾರ ಸಮನ್ಸ್ ಜಾರಿ ಮಾಡಿದೆ.

ಮುಜಾಫರನಗರದ ಕವಾಲ್ ಎಂಬಲ್ಲಿ ಹತ್ಯೆಗೈಯಲಾಗಿದ್ದ ಶಾನ್ಹಾವಾಜ್ ಕೊಲೆ ಪ್ರಕರಣದ ಬೆಳವಣಿಗೆ ಬಗ್ಗೆ ವಿವರಣೆ ನೀಡಿ ಎಂದು ತನಿಖಾ ಅಧಿಕಾರಿಗೆ ಮುಖ್ಯ ನ್ಯಾಯಾಮೂರ್ತಿ ನರೇಂದ್ರ ಕುಮಾರ್ ಸಮನ್ಸ್ ಜಾರಿ ಮಾಡಿದ್ದಾರೆ. ಜೂನ್ 14ರೊಳಗೆ ಸಮನ್ಸ್‌ಗೆ ಉತ್ತರಿಸುವಂತೆ ನ್ಯಾಯಾಲಯ ಸೂಚಿಸಿದೆ.

ಮುಜಾಫರನಗರದ ಗಲಭೆ ಸಂದರ್ಭದಲ್ಲಿ ಕವಾಲ್ ಎಂಬ ಹಳ್ಳಿಯಲ್ಲಿ 26 ವರ್ಷದ ಕಲ್‌ವುರ್ಫ್ ಶಾನ್ಹಾವಾಜ್ ಎಂಬುವವನ್ನು ಗೌರವ್ ಮತ್ತು ಸಚಿನ್ ಎಂಬ ಇಬ್ಬರು ಯುವಕರು ಕೊಲೆ ಮಾಡಿದ್ದರು.

ತಮ್ಮ ಮಗ ಶಾನ್ಹಾವಾಜ್ ಕೊಲೆ ಪ್ರಕರಣದ ತನಿಖೆಯಲ್ಲಿ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ ಎಂದು ಶಾನ್ಹಾವಾಜ್ ಅವರ ತಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ತನಿಖಾ ಅಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.

ಪ್ರಕರಣ ಸಂಬಂಧಪಟ್ಟಂತೆ ಗೌರವ್, ಸಚಿನ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ ಜಾರ್ಜ್‌ಶೀಟ್ ಸಲ್ಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement