ಅಮೆರಿಕದ ಪರಮಾಣು ಕಾರ್ಯದರ್ಶಿಯವರ ಪ್ರವಾಸ ರದ್ದು
ದೇವಯಾನಿ ಖೋಬ್ರಾಗದೆ ಪ್ರಕರಣದ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿದ...
ವಾಷಿಂಗ್ಟನ್: ದೇವಯಾನಿ ಖೋಬ್ರಾಗದೆ ಪ್ರಕರಣದ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿದ ಕಾರಣ, ಅಮೆರಿಕದ ಪರಮಾಣು ಕಾರ್ಯದರ್ಶಿ ಅರ್ನೆಸ್ಟ್ ಮೋನಿಜ್ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಅಮೆರಿಕ ಮತ್ತು ಭಾರತ ನಡುವಿನ ಪರಮಾಣು ಸಹಕಾರ ಕಾರ್ಯಗಳ ಬಗ್ಗೆ ಮಾತುಕತೆ ನಡೆಸುವ ಸಲುವಾಗಿ ಮೋನಿಜ್ ಅವರ ಭಾರತ ಭೇಟಿ ನಿಗದಿ ಪಡಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಮೆರಿಕ, ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ದಿನಾಂಕವನ್ನು ಮರು ನಿಗದಿಪಡಿಸಲಾಗುವುದು ಎಂದು ಹೇಳಿದೆ.