ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾಲಿವುಡ್ ನೈಟ್ ಪಾರ್ಟಿ: ಅಖಿಲೇಶ್‌ಗೆ ಟೀಕೆಗಳ ಸುರಿಮಳೆ

ಮುಜಾಫರ್ ನಗರ ಗಲಭೆ ಸಂತ್ರಸ್ತರು ಚಳಿಯಿಂದ ಕಂಗೆಟ್ಟು ದಿನದೂಡುತ್ತಿದ್ದರೆ ಇತ್ತ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ...

Rashmi Kasaragodu
Updated On : 9 Jan 2014, 3:27 am

ಸೈಫೈ: ಮುಜಾಫರ್ ನಗರ ಗಲಭೆ ಸಂತ್ರಸ್ತರು ಚಳಿಯಿಂದ ಕಂಗೆಟ್ಟು ದಿನದೂಡುತ್ತಿದ್ದರೆ ಇತ್ತ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಊರಾದ ಸೈಫೈಯಲ್ಲಿ ಬುಧವಾರ ಅದ್ದೂರಿ ಬಾಲಿವುಡ್ ನೈಟ್ ಪಾರ್ಟಿ ನಡೆದಿದೆ.

ಈ ಬಗ್ಗೆ ಮುಖ್ಯಮಂತ್ರಿ ಅಖಿಲೇಶ್‌ಯಾದವ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಭಾರೀ ಆಕ್ರೋಶವೆದ್ದಿದೆ. ಮುಜಾಫರ್‌ನಗರ ಗಲಭೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಮುತುವರ್ಜಿ ವಹಿಸದೆ ಸೈಫ್‌ಯಲ್ಲಿ ಮಜಾ ಮಾಡಿದ ಮುಖ್ಯಮಂತ್ರಿ ಬಗ್ಗೆ ವಿಮರ್ಶಕರು ಟೀಕಾಪ್ರಹಾರ ನಡೆಸಿದ್ದಾರೆ.

ಬುಧವಾರ ನಡೆದ ಬಾಲಿವುಡ್ ನೈಟ್‌ನಲ್ಲಿ ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್ ಮತ್ತು ದೀಪಿಕಾ ಪಡುಕೋಣೆ ಕಾರ್ಯಕ್ರಮ ನೀಡಿದ್ದರು.

ಸೈಫೈನಲ್ಲಿ ನಡೆಯುತ್ತಿರುವ ಅದ್ದೂರಿ ಕಾರ್ಯಕ್ರಮದ ಬಗ್ಗೆ ವರದಿಯಾಗುತ್ತಿದ್ದಂತೆ, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮುಜಾಫರ್‌ನಗರ ಗಲಭೆ ಸಂತ್ರಸ್ತರಿಗೆ ಏನು ಮಾಡಿದ್ದಾರೆ? ಎಂಬ ಪ್ರಶ್ನೆ ಎದ್ದಿತ್ತು.

ಕೆಲವೊಂದು ಮೂಲಗಳ ಪ್ರಕಾರ ಸಲ್ಮಾನ್, ಮಾಧುರಿ, ದೀಪಿಕಾ, ರಣ್‌ವೀರ್ ಸಿಂಗ್, ಮಲ್ಲಿಕಾ ಶೆರಾವತ್, ಆಲಿಯಾ ಭಟ್ ಮತ್ತು ವರುಣ್ ಧವನ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ಅವರಿಗೆ 7 ಜೆಟ್ ಸೌಕರ್ಯವನ್ನು ಒದಗಿಸಲಾಗಿತ್ತು.

ಆದಾಗ್ಯೂ, ಟೀಕೆ ಪ್ರಹಾರಗಳು ಹೆಚ್ಚಾದ ಕಾರಣ ಗ್ರಾಂಡ್ ಫೈನಲ್  ನೇರ ಪ್ರಸಾರವನ್ನು ರದ್ದು ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement