ಶೀಘ್ರದಲ್ಲೇ ಒಳ್ಳೆ ಟೈಮ್ ಬರಲಿದೆ: ಮೋದಿ
ಒಳ್ಳೆ ದಿನಗಳ ಆಗಮನಕ್ಕೆ ಕೆಲವೇ ತಿಂಗಳು ಉಳಿದಿದೆ ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಧಾನಿ ಅಭ್ಯರ್ಥಿ...
ನವದೆಹಲಿ: ಒಳ್ಳೆ ದಿನಗಳ ಆಗಮನಕ್ಕೆ ಕೆಲವೇ ತಿಂಗಳು ಉಳಿದಿದೆ ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಿದ ಮೋದಿ, ಒಳ್ಳೆ ದಿನಗಳ ಆಗಮನಕ್ಕೆ ಕೆಲವೇ ತಿಂಗಳು ಬಾಕಿ ಇದೆ ಎಂದಿದ್ದಾರೆ.
ಯಾವುದೇ ವ್ಯಕ್ತಿ ಭರವಸೆ ಕಳೆದುಕೊಳ್ಳಬಾರದು, ಒಳ್ಳೆ ದಿನಗಳು ಮತ್ತೇ ಬರಲಿದೆ. ಆದರೆ ಅದಕ್ಕಾಗಿ ನಾವು ಇನ್ನು 4-6 ತಿಂಗಳು ಕಾಯಬೇಕಿದೆ ಎಂದು ಹೇಳಿದ್ದಾರೆ.
ಅನಿವಾಸಿ ಭಾರತೀಯರನ್ನು ಕೇವಲ ಪೌಂಡ್ ಮತ್ತು ಡಾಲರ್ಸ್‌ಗೆ ತೂಗಬಾರದು. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಭಾರತದಲ್ಲಿ ಬಂಡವಾಳ ಹೂಡಲು ಸೂಚಿಸಬೇಕು ಎಂದು ಮೋದಿ ತಿಳಿಸಿದ್ದಾರೆ.
ಅನಿವಾಸಿ ಭಾರತೀಯರು ಸಹೋದರಿ ಸಹೋದರರಿದ್ದಂತೆ. ಅವರನ್ನು ಕೇವಲ ಡಾಲರ್ ಮತ್ತು ಪೌಂಡ್ಸ್‌ಗಳಿಗೆ ಹೋಲಿಕೆ ಮಾಡಬಾರದು. ಅವರಿಗೆ ವಿಭಿನ್ನ ಕ್ಷೇತ್ರದಲ್ಲಿ ಹೆಚ್ಚು ಅನುಭವಿದೆ. ಈ ಅನುಭವವನ್ನು ಸರಿಯಾದ ಮಾರ್ಗದರ್ಶನಗಳಿಂದ ಬಳಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಅನಿವಾಸಿ ಭಾರತೀಯರು ಮತ್ತು ಇತರೆ ಬಂಡವಾಳ ಹೂಡಿಕೆದಾರರು ನೇರವಾಗಿ ರಾಜ್ಯ ಸರ್ಕಾರಗಳನ್ನು ನೇರವಾಗಿ ಸಂಪರ್ಕಸುತ್ತಿದ್ದು, ಬಂಡವಾಳ ಹೂಡಿಕೆ ಮುಂದಾಗಿದ್ದಾರೆ. ಆದರೆ ಕ್ಷುಲ್ಲಕ ರಾಜಕಾರಣ ಇಂತಹ ಅವಕಾಶಗಳನ್ನು ಹಾಳು ಮಾಡುತ್ತಿವೆ ಎಂದು ಮೋದಿ ವಿಷಾಧಿಸಿದ್ದಾರೆ.
ಒಗ್ಗಟ್ಟಾಗಿ ದುಡಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಇದಕ್ಕೆ ಎಲ್ಲರು ಮುಂದಾಗಬೇಕು ಎಂದು ಮೋದಿ ಹೇಳಿದ್ದಾರೆ.