ಸಚಿನ್ ಪ್ರಶಂಸೆ ನಿಲ್ಲಿಸಿ: ಪಾಕ್ ಮಾಧ್ಯಮಕ್ಕೆ ತಾಲಿಬಾನ್ ಎಚ್ಚರಿಕೆ
ಭಾರತೀಯ ಕ್ರಿಕೆಟ್ ದೇವರು ಸಚಿನ್ ರಮೇಶ್ ತೆಂಡೂಲ್ಕರ್ ಅವರ ಗುಣಗಾನ ಮಾಡುವುದನ್ನು ನಿಲ್ಲಿಸುವಂತೆ ತಾಲಿಬಾನ್ ಸಂಘಟನೆಯು...
ಇಸ್ಲಾಮಾಬಾದ್: ಭಾರತೀಯ ಕ್ರಿಕೆಟ್ ದೇವರು ಸಚಿನ್ ರಮೇಶ್ ತೆಂಡೂಲ್ಕರ್ ಅವರ ಗುಣಗಾನ ಮಾಡುವುದನ್ನು ನಿಲ್ಲಿಸುವಂತೆ ತಾಲಿಬಾನ್ ಸಂಘಟನೆಯು ಪಾಕ್ ಮಾಧ್ಯಮಗಳಿಗೆ ತಾಕೀತು ಮಾಡಿರುವ ವಿಡಿಯೋವನ್ನು ಬಹಿರಂಗಪಡಿಸಿದೆ.
ತಾಲಿಬಾನ್ ಸಂಘಟನೆಯ ವೀಡಿಯೋ ಸಂದೇಶವೊಂದನ್ನು ರವಾನಿಸಿದ್ದು, ಅದರಲ್ಲಿ ಮಾತನಾಡಿರುವ ತಾಲಿಬಾನ್ ವಕ್ತಾರ ಶಹೀದುಲ್ಲಾ ಶಹೀದ್ ಈ ರೀತಿ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಕ್ರಿಕೆಟಿಕ ಸಚಿನ್ ಅವರನ್ನು ಪಾಕಿಸ್ತಾನಿ ಮಾದ್ಯಮಗಳು ಶ್ಲಾಘಿಸುತ್ತಿದೆ. ಇದು ತೀರಾ ವಿಷಾಧದ ಸಂಗತಿಯಾಗಿದೆ. ಮತ್ತೊಂದೆಡಿ ಕೆಲವು ಮಾಧ್ಯಮಗಳು ಪಾಕ್ ನಾಯಕ ಮಿಸ್ಬಾ ಉಲ್ ಹಕ್ ಅವರನ್ನು ನಿಂದಿಸುತ್ತಿವೆ. ಹೀಗಾಗಿ ತೆಂಡೂಲ್ಕರ್ ಅವರನ್ನು ಹೊಗಳದಂತೆ ಎಚ್ಚರಿಕೆ ನೀಡಿದೆ.
ಸಚಿನ್ ತೆಂಡೂಲ್ಕರ್ ಎಷ್ಟೇ ಒಳ್ಳೆಯವರಿರಲಿ, ಆತ ಭಾರತೀಯ ಹೀಗಾಗಿ ಆತನನ್ನು ಹೊಗಳಬಾರುದು. ಅಲ್ಲದೆ, ಇನ್ನು ಮುಂದೆ ಸಚಿನ್ರನ್ನು ಹೊಗಳಿದರೆ ಅದಕ್ಕೆ ತಕ್ಕ ಉತ್ತರ ತಾಲಿಬಾನಿಗಳು ನೀಡಿಲಿದ್ದಾರೆ ಎಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮುಂಬೈನಲ್ಲಿ ನಡೆದ ಸಚಿನರ ವಿದಾಯದ ಪಂದ್ಯ ಮತ್ತು ವಿದಾಯ ಭಾಷಣಕ್ಕೆ ಪಾಕಿಸ್ತಾನಿ ಮಾಧ್ಯಮಗಳು ನೇರ ಪ್ರಸಾರದ ಮೂಲಕ ಭರ್ಜರಿ ಕವರೇಜ್ ನೀಡಿದ್ದವು. ಅಲ್ಲದೆ ಅಲ್ಲಿನ ಕೆಲ ಪತ್ರಿಕೆಗಳು ಸಚಿನ್ ಇಲ್ಲದೆ ಕ್ರಿಕೆಟ್ ಆಟವೇ ಬಡವಾಗಿದೆ ಎಂದೆಲ್ಲಾ ವರ್ಣಿಸಿದ್ದವು. ಈ ಹಿನ್ನೆಲೆಯಲ್ಲಿ ತಾಲಿಬಾನಿಗಳು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿವೆ.