ಅಲ್ಪಸಂಖ್ಯಾತರನ್ನು ಬಂಧಿಸುವಾಗ ಎಚ್ಚರಿಕೆಯಿಂದಿರಿ: ಶಿಂಧೆ
ಅಲ್ಪಸಂಖ್ಯಾತರನ್ನು ವಿನಾಕಾರಣ ಬಂಧಿಸುವ ಬಗ್ಗೆ ಕಿಡಿಕಾರಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಅಲ್ಪಸಂಖ್ಯಾತರನ್ನು...
ನವದೆಹಲಿ: ಅಲ್ಪಸಂಖ್ಯಾತರನ್ನು ವಿನಾಕಾರಣ ಬಂಧಿಸುವ ಬಗ್ಗೆ ಕಿಡಿಕಾರಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಅಲ್ಪಸಂಖ್ಯಾತರನ್ನು ಬಂಧಿಸುವಾಗ ಎಚ್ಚರಿಕೆಯಿಂದಿರಿ ಎಂದು ಹೇಳಿದ್ದಾರೆ.
ಅಕ್ರಮವಾಗಿ ಅಲ್ಪಸಂಖ್ಯಾತರನ್ನು ಬಂಧಿಸಿದರೆ ಅವರನ್ನು ಕೂಡಲೇ ಬಂಧಮುಕ್ತಗೊಳಿಸಬೇಕೆಂದು ನಾವು ಎಲ್ಲ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ತಿಳಿಸಿದ್ದೇವೆ ಎಂದು ಶಿಂಧೆ ಹೇಳಿದ್ದಾರೆ.
ಅದೇ ವೇಳೆ ಅಲ್ಪಸಂಖ್ಯಾತರು ಎಂದು ಹೇಳುವ ಮೂಲಕ ತಾನು ಯಾವುದೇ ಧರ್ಮವನ್ನು ಉಲ್ಲೇಖಿಸಿಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಜನರು ಎಂದೇ ನಾನು ಉದ್ದೇಶಿಸಿದ್ದು ಎಂದು ಶಿಂಧೆ ಸ್ಪಷ್ಟನೆ ನೀಡಿದ್ದಾರೆ.
ಏತನ್ಮಧ್ಯೆ, ಶಿಂಧೆ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಶಿಂಧೆ ಅವರು ವಿಭಜಿಸಿ ಆಳುವ ರೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದೆ.