ಈರುಳ್ಳಿ ತಿನ್ನಬೇಡಿ: ಸುಪ್ರೀಂ ಕೋರ್ಟ್
ಈರುಳ್ಳಿ ಮತ್ತು ಇತರ ತರಕಾರಿಗಳ ಬೆಲೆ ನಿಯಂತ್ರಣಗೊಳಿಸಬೇಕೆಂದು ಒತ್ತಾಯಿಸಿ...
ನವದೆಹಲಿ: ಈರುಳ್ಳಿ ಮತ್ತು ಇತರ ತರಕಾರಿಗಳ ಬೆಲೆ ನಿಯಂತ್ರಣಗೊಳಿಸಬೇಕೆಂದು ಒತ್ತಾಯಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿಹಾಕಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಬಿ.ಎಸ್ ಚೌಹಾಣ್ ನೇತೃತ್ವದ ಪೀಠ ಈರುಳ್ಳಿ ತಿನ್ನುವುದನ್ನು ಕಡಿಮೆ ಮಾಡಿ, ಬೆಲೆ ತನ್ನಿಂದ ತಾನೇ ಕಡಿಮೆಯಾಗುತ್ತದೆ ಎಂದು ಹೇಳಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಈರುಳ್ಳಿ ರಫ್ತು 29,000 ಟನ್ಗಳಾಗಿತ್ತು. ಅದೇ ವೇಳೆ ಏಪ್ರಿಲ್-ನವಂಬರ್ ಅವಧಿಯಲ್ಲಿ 8.53 ಲಕ್ಷ ಟನ್ ಈರುಳ್ಳಿ ವಿದೇಶಗಳಿಗೆ ರಫ್ತಾಗಿತ್ತು.