ಚುನಾವಣೆ ಸ್ಪರ್ಧಿಸಲು ನಂದನ್ ನಿಲೇಕಣಿ ರೆಡಿ
ಇನ್ಫೋಸಿಸ್ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ 2014ರಲ್ಲಿ ರಾಜಕಾರಣಕ್ಕೆ ಪ್ರವೇಶ ಮಾಡುತ್ತಾರೆ ಎಂದಿದ್ದ ಊಹೆ ಈಗ...
ಬೆಂಗಳೂರು: ಇನ್ಫೋಸಿಸ್ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ 2014ರಲ್ಲಿ ರಾಜಕಾರಣಕ್ಕೆ ಪ್ರವೇಶ ಮಾಡುತ್ತಾರೆ ಎಂದಿದ್ದ ಊಹೆ ಈಗ ನಿಜವಾಗಿದೆ. ಅಂದಹಾಗೆ ನಿಲೇಕಣಿ ಇದೀಗ ಚುನಾವಣೆ ಸ್ಪರ್ಧಿಸಲು ಸಿದ್ಧರಾಗಿದ್ದು, ಕಾಂಗ್ರೆಸ್ ಪಕ್ಷ ಅವರನ್ನು ಬೆಂಬಲಿಸಲಿದೆ.
ರಾಜಕಾರಣದ ಮೂಲಕ ನಾವು ಬದಲಾವಣೆಯನ್ನು ತರಬಹುದು. ಆ ಬದಲಾವಣೆಯನ್ನೇ ನಾನು ಬಯಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಲೇಕಣಿ ಅವರು ಹೇಳಿದ್ದಾರೆ. ನನಗೆ ಮತ್ತು ನನ್ನ ಯೋಚನೆಗಳಿಗೆ ಕಾಂಗ್ರೆಸ್ ಬೆಂಬಲವಿದೆ ಎಂದು ಹೇಳಿದ ನಿಲೇಕಣಿ, ಸರ್ಕಾರದ ಆಧಾರ ಕಾರ್ಡ್ ಯೋಜನೆಯ ಉಸ್ತುವಾರಿಯನ್ನು ವಹಿಸಿದ್ದರು.
ಆದಾಗ್ಯೂ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ವಲಯದಿಂದ ಕಾಂಗ್ರೆಸ್ ನಿಲೇಕಣಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಿದೆ ಎಂದು ಹೇಳಲಾಗುತ್ತಿದೆ.
ನಾನು 'ಐಡಿಯಾಸ್ ಫಾರ್ ಬೆಂಗಳೂರು' ಎಂಬ ಯೋಜನೆಯನ್ನು ಆರಂಭಿಸುತ್ತಿದ್ದೇನೆ. ಬೆಂಗಳೂರು ನಗರವನ್ನು ಇನ್ನಷ್ಟು ಉತ್ತಮ ಪಡಿಸುವುದಕ್ಕಾಗಿ ಜನರು ಇಲ್ಲಿ ಸಲಹೆಗಳನ್ನು ನೀಡಬಹುದು ಎಂದು ನಿಲೇಕಣಿ ಹೇಳಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್ಗೆ ಸೇರುವ ಬಗ್ಗೆ ನಿಲೇಕಣಿ ಅವರು ಈವರೆಗೂ ಅಧಿಕೃತವಾದ ಹೇಳಿಕೆ ನೀಡಿಲ್ಲ.